ಉಡುಪಿ: ರಾಜಸ್ಥಾನದ ಉದಯಪುರದಲ್ಲಿ ನಡೆದ ಕನ್ಹಯ್ಯಾ ಲಾಲ್ ಹತ್ಯೆ ಖಂಡಿಸಿ ಉಡುಪಿಯಲ್ಲಿ ಇವತ್ತು ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ನಗರದಿಂದ ಸುರಿಯುವ ಮಳೆಯಲ್ಲೂ ಪ್ರತಿಭಟನಾ ಮೆರವಣಿಗೆ ನಡೆಸಿದ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ನೂಪುರ್ ಶರ್ಮಾ ಜಿಂದಾಬಾದ್, ಕನ್ಹಯ್ಯ ಲಾಲ್ ಅಮರ್ ರಹೇ ಘೋಷಣೆಗಳನ್ನು ಕೂಗಿದರು. ಮೆರವಣಿಗೆ ಪ್ರಮುಖ ರಸ್ತೆಯಲ್ಲಿಸಾಗಿ ಹುತಾತ್ಮ ಸೈನಿಕ ಸ್ಮಾರಕದ ಎದುರು ಸಮಾವೇಶಗೊಂಡಿತು. ಪ್ರವಾದಿ ಮೊಹಮ್ಮದರ ಕುರಿತು ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಆಡಿದ್ದ ಮಾತು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್‌ವಂದನ್ನು ಶೇರ್ ಮಾಡಿದ್ದ ಕನ್ಹಯ್ಯಾ ಲಾಲ್ ಎಂಬ ವ್ಯಕ್ತಿಯನ್ನು ರಾಜಸ್ಥಾನದ ಉದಯ್‌ಪುರದಲ್ಲಿ ಇಬ್ಬರು ಧರ್ಮಾಂಧ ವ್ಯಕ್ತಿಗಳು ಐಸಿಸ್ ಮಾದರಿಯಲ್ಲಿ ಶಿರಚ್ಛೇದಗೊಳಿಸಿ ಹತ್ಯೆ ಮಾಡಿದ್ದರು. ಜೊತೆಗೆ ಇಡೀ ಘಟನೆಯನ್ನು ವಿಡಿಯೋ ಮಾಡಿ ಹರಿ ಯಬಿಟ್ಟಿದ್ದು ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಸಿಕ್ಕರೆ ಅವರನ್ನೂ ಹತ್ಯೆ ಮಾಡುವ ಬೆದರಿಕೆ ಹಾಕಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖಂಡರು ಈ ಹತ್ಯೆ ಖಂಡನೀಯ, ಇಬ್ಬರು ಕೊಲೆಗಾರರಿಗೆ ಕಠಿಣ ಶಿಕ್ಷೆ ನೀಡಬೇಕು, ಜಿಹಾದಿ ಶಕ್ತಿಗಳಿಗೆ ನಾವು ಹೆದರುವುದಿಲ್ಲ ಎಂದು ಹೇಳಿದರು.
Kshetra Samachara
30/06/2022 04:38 pm