ಪುತ್ತೂರು: ರಾಜಸ್ಥಾನದ ಉದಯಪುರದಲ್ಲಿ ಹಿಂದೂ ವ್ಯಕ್ತಿಯ ಕತ್ತು ಕೊಯ್ದು ಹತ್ಯೆ ನಡೆಸಿದ ಘಟನೆಯನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಪುತ್ತೂರಿನ ದರ್ಬೆ ವೃತ್ತದ ಬಳಿ ಪ್ರತಿಭಟನೆ ನಡೆಯಿತು. ದೊಂದಿ ಹಿಡಿದು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಜಿಹಾದ್ ಮಾನಸಿಕತೆಯ ಜನತೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ರಾಜಸ್ಥಾನದಲ್ಲಿ ಜಿಹಾದಿ ಮಾನಸಿಕತೆಯ ಮಂದಿ ಸೇರಿ ಅಮಾಯಕ ವ್ಯಕ್ತಿಯೋರ್ವರನ್ನು ಕತ್ತು ಕೊಯ್ದು ಕೊಲೆ ಮಾಡಿದ್ದಾರೆ. ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಹೇಳಿಕೆಯನ್ನು ವಿರೋಧಿಸಿ ಈ ಕೃತ್ಯ ನಡೆಸಿರುವುದಾಗಿ ಆರೋಪಿಗಳೇ ಹೇಳಿದ್ದು, ನೂಪುರ್ ಶರ್ಮಾ ಕುರಾನ್‌ನಲ್ಲಿ ಉಲ್ಲೇಖವಾದ ಸತ್ಯ ವಿಚಾರವನ್ನೇ ಹೇಳಿದ್ದಾರೆ.
ನೂಪುರ್ ಶರ್ಮ ಇಡೀ ಹಿಂದೂ ಸಮಾಜ ನಿಂತಿದೆ. ರಾಜಸ್ಥಾನದಲ್ಲಿ ನಡೆದ ಈ ಕೃತ್ಯದ ನೇರ ಹೊಣೆಯನ್ನು ಅಲ್ಲಿನ ಮುಖ್ಯಮಂತ್ರಿ ಆಶೋಕ್ ಗೆಹ್ಲೋಟ್ ಹೊತ್ತುಕೊಳ್ಳಬೇಕು. ಕೇಂದ್ರ ಸರಕಾರ ತಕ್ಷಣವೇ ರಾಜಸ್ಥಾನದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಬೇಕೆಂದು ಒತ್ತಾಯಿಸಿದ ಅವರು ಮುಂದಿನ ದಿನಗಳಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲೂ ಇಂಥಹ ಮಾನಸಿಕತೆಯು ಬರುವ ಸಾಧ್ಯತೆಯಿದ್ದು,ಹಿಂದೂ ಸಮಾಜ ಈ ಮಾನಸಿಕತೆಯ ವಿರುದ್ಧ ಒಗ್ಗಟ್ಟಾಗಬೇಕೆಂದರು.
ಈ ಮಾನಸಿಕತೆಯ ಜನರ ವಿರುದ್ಧ ಹಿಂದೂ ಸಮಾಜ ತಕ್ಕ ಉತ್ತರ ನೀಡ ಸಿದ್ಧಗೊಳ್ಳಬೇಕೆಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
Kshetra Samachara
29/06/2022 10:40 pm