ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕಯ್ಯಾರ ಕಿಞ್ಞಣ್ಣ ರೈ ಹೆಸರು ಕೈಬಿಟ್ಟ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ: ಬಂಟರ ಸಂಘದಿಂದ ಅಸಮಾಧಾನ

ಮಂಗಳೂರು: 'ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ ಎಲ್ಲರೂ ಎದ್ದೆದ್ದು ಓಡಿ ಬನ್ನಿ ಕನ್ನಡದ ಗಡಿಕಾಯೆ ಗುಡಿ ಕಾಯೆ ನುಡಿ ಕಾಯೆ ಓಡಿ ಬನ್ನಿ' ಇದು ಅಚ್ಚಗನ್ನಡದ ನೆಲ ಕಾಸರಗೋಡು ತಾಲೂಕು ಕೇರಳದ ಪಾಲಾದಾಗ ಆಘಾತಗೊಂಡು ಕಯ್ಯಾರ ಕಿಞ್ಞಣ್ಣ ರೈಯವರು ಬರೆದ ಪದ್ಯ.

ಕಾಸರಗೋಡನ್ನು ಮತ್ತೆ ಕನ್ನಡ ನೆಲದೊಂದಿಗೆ ಸೇರಿಸಬೇಕೆಂಬ ಆಕ್ರೋಶದ ಕಿಡಿ ಅವರ ಕಡೆಯ ಉಸಿರಿನವರೆಗೆ ಹಾಗೆಯೇ ಇತ್ತು. ಆದರೆ ಕರ್ನಾಟಕದೊಂದಿಗೆ ಕಾಸರಗೋಡಿನ ವಿಲೀನಕ್ಕೆ ಅಹರ್ನಿಶಿ ದುಡಿದ ಕಯ್ಯಾರ ಕಿಞ್ಞಣ್ಣ ರೈಗಳ ಹೆಸರು ಪಠ್ಯದಲ್ಲಿ ಕೈಬಿಟ್ಟಿರೋದು ಕರಾವಳಿಯಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

1956ರಲ್ಲಿ ಭಾಷಾವಾರು ಪ್ರಾಂತ್ಯಗಳು ರಚನೆಯಾದಾಗ ಕೇರಳಿಗೊಬ್ಬನ ಕುತಂತ್ರದಿಂದ ಈ ಭಾರೀ ಅವಘಡ ನಡೆಯಿತು. ಈ ತೊಂದರೆಯನ್ನು ಸರಿಪಡಿಸಲು ಕಯ್ಯಾರ ಕಿಞ್ಞಣ್ಣ ರೈಯವರು ಕಡೆಯ ಉಸಿರಿನವರೆಗೆ ದುಡಿದರು. ಆದರೆ ಕರ್ನಾಟಕ ಏಕೀಕರಣದಲ್ಲಿ ಮುಂಚೂಣಿಯಲ್ಲಿದ್ದ ಇವರ ಹೆಸರು ಏಳನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿನ ಕರ್ನಾಟಕ ಏಕೀಕರಣ ಹಾಗೂ ಗಡಿವಿವಾದಗಳು ಎಂಬ ಪಠ್ಯದಲ್ಲಿ ಮರೆಯಾಗಿರೋದು ವಿಪರ್ಯಾಸವೇ ಸರಿ.

ಇದು ಕರಾವಳಿಯಲ್ಲಿ ಕರಾವಳಿಯಲ್ಲಿ ದೊಡ್ಡ ಮಟ್ಟದ ಅಸಮಾಧಾನಕ್ಕೆ ಕಾರಣವಾಗಿದೆ. ಇದೀಗ ಕಯ್ಯಾರ ಕಿಞ್ಞಣ್ಣ ರೈಗಳ ಸಮುದಾಯವಾದ ಬಂಟ ಸಮುದಾಯವು ಈ ವಿಚಾರದಲ್ಲಿ ತಮ್ಮ ಅಸಮಾಧಾನದ ದನಿಯನ್ನು ಎತ್ತಿದೆ.

ಬಂಟರ ಯಾನೆ ನಾಡವರ ಮಾತೃ ಸಂಘ(ರಿ)ವು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ 'ಕಯ್ಯಾರರ ಹೆಸರು ಪಠ್ಯದಿಂದ ತೆಗೆದು ಹಾಕಿರೋದು ನಮಗೆ ಭಾರೀ ಆಘಾತವನ್ನುಂಟು ಮಾಡಿದೆ. ಇದು ಅವರ ಮೇರು ವ್ಯಕ್ತಿತ್ವಕ್ಕೆ ಮಾಡಿರುವ ಅವಮಾನ. ತಮ್ಮ 101ನೇ ಇಳಿ ವಯಸ್ಸಿನಲ್ಲಿಯೂ ಕಾಸರಗೋಡು ಕರ್ನಾಟಕಕ್ಕೆ ಸೇರ್ಪಡೆಯಾಗಬೇಕೆಂದು ಗಟ್ಟಿ ದನಿಯಲ್ಲಿ ಕರೆಕೊಟ್ಟಿದ್ದ ಕಯ್ಯಾರರ ಹೆಸರನ್ನು ಪಠ್ಯಪುಸ್ತಕದಲ್ಲಿ ಮತ್ತೆ ಸೇರಿಸಬೇಕೆಂದು ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಪತ್ರವನ್ನು ಬರೆಯಲಾಗಿದೆ. ಅಲ್ಲದೆ ಪಠ್ಯಪರಿಷ್ಕರಣ ಸಮಿತಿಯು ಕಯ್ಯಾರರಿಗೆ ಮಾಡಿರುವ ಅವಮಾನದ ವಿರುದ್ಧ ವಾರ್ಡ್, ಗ್ರಾಮ, ಜಿಲ್ಲಾ, ರಾಜ್ಯ, ದೇಶವ್ಯಾಪಿಯಾಗಿ ಹೋರಾಟ ಮಾಡಲಾಗುತ್ತದೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘವು ಆಕ್ರೋಶ ವ್ಯಕ್ತಪಡಿಸಿದೆ.

ಈ ಸಂದರ್ಭದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ(ರಿ)ದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಇದ್ದರು.

Edited By : Nagesh Gaonkar
Kshetra Samachara

Kshetra Samachara

29/06/2022 09:38 pm

Cinque Terre

6.87 K

Cinque Terre

0

ಸಂಬಂಧಿತ ಸುದ್ದಿ