ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜಪೆ: ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆ; ಗ್ರಾಮಸ್ಥರ ನಿರೀಕ್ಷೆ ಹುಸಿ: ಮಿಥುನ್ ರೈ

ಮಂಗಳೂರು: ದೂರದೃಷ್ಟಿಯುಳ್ಳ ಯೋಚನೆಯೊಂದಿಗೆ ಬಜಪೆ ಗ್ರಾಮ ಪಂಚಾಯತ್ ಅನ್ನು ಪಟ್ಟಣ ಪಂಚಾಯತ್ ಯಾಗಿ ಮೇಲ್ದರ್ಜೆಗೆ ಏರಿಸಿದ ನಂತರ ಗ್ರಾಮಸ್ಥರು ಬಹು ನಿರೀಕ್ಷೆಯಿಂದ ಇದ್ದರು. ದಿನದ 24 ಗಂಟೆ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ಸುಸಜ್ಜಿತ ತ್ಯಾಜ್ಯ ವಿಲೇವಾರಿ, ದಾರಿದೀಪ ವ್ಯವಸ್ಥೆ, ವಿಶೇಷವಾಗಿ ಎಲ್ಲಾ ಸೌಲತ್ತುಗಳನ್ನು ಒಳಗೊಂಡ ಆಸ್ಪತ್ರೆ ಇಂತಹ ಸೌಲಭ್ಯಗಳು ಇತರ ಪಟ್ಟಣ ಪಂಚಾಯತಿ ನಲ್ಲಿ ದೊರೆತಂತೆ ನಮ್ಮಲ್ಲೂ ಸಿಗಬಹುದೆಂಬ ನಿರೀಕ್ಷೆಯಲ್ಲಿ ಇದ್ದರು. ಆದರೆ ಗ್ರಾಮಸ್ಥರ ನಿರೀಕ್ಷೆ ಹುಸಿಯಾಗಿದೆ. ಪಟ್ಟಣ ಪಂಚಾಯತ್ ಘೋಷಣೆಯಾಗಿ ಒಂದುವರೆ ವರ್ಷ ಕಳೆದರೂ ಪೂರ್ಣಕಾಲಿಕ ಸಿಬ್ಬಂದಿಯ ಕೊರತೆ, ಇನ್ನಿತರ ಮೂಲಭೂತ ಸೌಕರ್ಯಗಳ ಕೊರತೆ, ಇದಕ್ಕಿಂತ ವಿಶೇಷವಾಗಿ ಮೆಸ್ಕಾಂ ನವರು ನಗರ ಪ್ರದೇಶಕ್ಕೆ ಸೀಮಿತಗೊಳಿಸಿದ ದರವನ್ನು ಈ ಪ್ರದೇಶಕ್ಕೆ ವಿಧಿಸುತ್ತಿರುವುದು ಖಂಡನೀಯವಾಗಿದ್ದು ಕಾಂಗ್ರೆಸ್ ಪಕ್ಷ ಮೌನವಾಗಿರುವುದಿಲ್ಲ. ನಿರಂತರ ಹೋರಾಟಗಳನ್ನು ನಡೆಸಿ ಜನರ ಪರ ಧ್ವನಿಯೆತ್ತಿದ್ದೇವೆ. ಅಧಿಕಾರಿಗಳು ಕೂಡ ನಿಯಮ ಬಾಹಿರ ವಸೂಲಾತಿಗಳನ್ನು ಕೂಡಲೇ ನಿಲ್ಲಿಸಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಹೇಳಿದರು.

ಅವರು ಮುಲ್ಕಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಬಜಪೆ ಕಾಂಗ್ರೆಸ್ ಪ್ರಜಾಪ್ರತಿನಿಧಿ ಸಮಿತಿಯ ಆಶ್ರಯದಲ್ಲಿ ನಡೆದ ಸಾರ್ವಜನಿಕ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಮಾಜಿ ಸಚಿವ ಕೆ ಅಭಯಚಂದ್ರ ಜೈನ್, ದಕ್ಷಿಣ ಕನ್ನಡ ಜಿಲ್ಲಾ ಡಾಕ್ಟರ್ ಸೆಲ್ ನ ಅಧ್ಯಕ್ಷ ಡಾ. ಶೇಖರ್ ಪೂಜಾರಿ, ಸ್ಥಳಿಯ ನಾಯಕರಾದ ದಯಾನಂದ ಮಾತನಾಡಿದರು. ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷಮೋಹನ್ ಕೋಟ್ಯಾನ್, ಮೂಡಬಿದ್ರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷವಲೇರಿಯನ್ ಸಿಕ್ವೇರ, ಕೆಪಿಸಿಸಿ ಕಾರ್ಡಿನೇಟರ್ ವಸಂತ ಬೆರ್ನಾಡ್, ಬಜಪೆ ಪ್ರಜಾಪ್ರತಿನಿಧಿ ಅಧ್ಯಕ್ಷ ಬಿಜೆ ರಹಿಮ್, ಬ್ಲಾಕ್ ಉಪಾಧ್ಯಕ್ಷರಾದ ಬಾಬು ಶೆಟ್ಟಿ ಮಳವೂರು, ಹಸನಬ್ಬ ಬಾಳ, ಎಕ್ಕಾರು ಮೋನಪ್ಪ ಶೆಟ್ಟಿ, ಬಜ್ಪೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುರೇಂದ್ರ ಪೆರ್ಗಡೆ, ಸಾಹುಲ್ ಹಮೀದ್ ಮತ್ತಿತರರು ಉಪಸ್ಥಿತರಿದ್ದರು

Edited By : PublicNext Desk
Kshetra Samachara

Kshetra Samachara

29/06/2022 08:51 pm

Cinque Terre

3.56 K

Cinque Terre

0

ಸಂಬಂಧಿತ ಸುದ್ದಿ