ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಎಬಿ ಶೆಟ್ಟಿ ವೃತ್ತ ತೆರವು : ಬಂಟ್ಸ್ ನಾಡವರ ಮಾತೃ ಸಂಘ ಆಕ್ರೋಶ

ಮಂಗಳೂರು: ಮಂಗಳೂರು ನಗರದಲ್ಲಿ ಎಬಿ ಶೆಟ್ಟಿ ವೃತ್ತವನ್ನು ತೆಗೆದು ಹಾಕಿದ್ದಕ್ಕೆ ಮಂಗಳೂರಲ್ಲಿ ಬಂಟ್ಸ್ ನಾಡವರ ಮಾತೃ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

ಮಂಗಳೂರು ನಗರದ ಬಂಟ್ಸ್ ಹಾಸ್ಟೆಲ್ ನಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ, ಬಂಟ ಸಮಾಜದಲ್ಲಿ ಹುಟ್ಟಿದ್ದ ಎ.ಬಿ ಶೆಟ್ಟಿಯವರು ಒಬ್ಬ ಅಪರೂಪದ ದೂರದೃಷ್ಠಿಯುಳ್ಳ ನಿಸ್ವಾರ್ಥ ರಾಜಕಾರಣಿಯಾಗಿದ್ದರು.

ಅವರು ದೇಶ ರಾಜ್ಯ ಹಾಗೂ ಜಿಲ್ಲೆಗೆ ಸಲ್ಲಿಸಿದ ಸೇವೆಯನ್ನು ನಾವು ಯಾವಾಗಲೂ ಸ್ಮರಿಸಬೇಕಾಗಿದೆ. ಇಂತಹ ಮಹೋನ್ನತ ವ್ಯಕ್ತಿತ್ವದ ಗೌರವಾನ್ವಿತ ಎ.ಬಿ ಶೆಟ್ಟಿಯವರ ಸ್ಮರಣಾರ್ಥವಾಗಿ ಎ.ಬಿ. ಶೆಟ್ಟಿ ವೃತ್ತವನ್ನು ಸುಂದರವಾಗಿ ರಚಿಸಿ ದಶಕಗಳು ಕಳೆದಿವೆ.

ಇತ್ತೀಚೆಗೆ ಸ್ಮಾರ್ಟ್ ಸಿಟಿ ಕಾಮಗಾರಿಯ ನೆಪದಲ್ಲಿ ಈ ವೃತ್ತವನ್ನು ನಿರ್ಮೂಲನೆ ಮಾಡುವುದರೊಂದಿಗೆ ಅವರ ಹೆಸರು ಸಹ ಎಲ್ಲಿಯೂ ಕಂಡುಬಾರದ ಹಾಗೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

114 ವರ್ಷಗಳ ಹಿಂದೆ ಸೊಸೈಟಿ ರಿಜಿಸ್ಟ್ರೇಷನ್ ಆಕ್ಟ್ ಪ್ರಕಾರ ನೊಂದಣಿಯಾದ ಬಂಟರ ಯಾನೆ ನಾಡವರ ಮಾತೃ ಸಂಘದ ಸ್ಥಾಪಕರಲ್ಲಿ ಎ.ಬಿ ಶೆಟ್ಟಿಯವರು ಒಬ್ಬರಗಾಗಿದ್ದರು ಹಾಗೂ ಸಂಘದ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

ಎ.ಬಿ. ಶೆಟ್ಟಿಯವರ ವೃತ್ತವನ್ನು ತೆಗೆದು ಅವರ ಹೆಸರು ಸಹ ಅಲ್ಲಿ ಇರದ ಹಾಗೆ ಮಾಡಿರುವುದು ಹಾಗೂ ಮೇರು ವ್ಯಕ್ತಿತ್ವದ ವ್ಯಕ್ತಿಗೆ ಅಗೌರವ ಸಲ್ಲಿಸಿರುವುದು ಇಡೀ ಬಂಟ ಸಮಾಜಕ್ಕೆ ಮಾಡಿದ ಅವಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಸಮಾಜದ ಗೌರವನ್ನು ರಕ್ಷಿಸುವುದು ಬಂಟರ ಮಾತೃಸಂಘದ ಜವಾಬ್ದಾರಿಯಾಗಿದೆ. ಆದ ಕಾರಣ ನಮ್ಮ ತಾಳ್ಮೆಯನ್ನು ಪರೀಕ್ಷಿಸುವ ಹಾಗೂ ಸಮಾಜಕ್ಕೆ ನೋವುಂಟುಮಾಡುವ ಕೆಲಸವನ್ನು ಮಾಡದೆ ಕೂಡಲೇ ಎ.ಬಿ ಶೆಟ್ಟಿ ವೃತ್ತದ ಪುನರ್ನಿರ್ಮಾಣ ಮಾಡಿ ಅವರ ಹೆಸರನ್ನು ಪ್ರಾಮುಖ್ಯವಾಗಿ ಕಾಣುವಂತೆ ನಾಮಫಲಕವನ್ನು ಅಳವಡಿಸಬೇಕು. ಇಲ್ಲದಿದ್ದರೆ ದೇಶವ್ಯಾಪಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

Edited By : Nagesh Gaonkar
Kshetra Samachara

Kshetra Samachara

29/06/2022 05:32 pm

Cinque Terre

3.78 K

Cinque Terre

0

ಸಂಬಂಧಿತ ಸುದ್ದಿ