ಮಂಗಳೂರು: ಚಡ್ಡಿ, ಕರಿಟೋಪಿ, ಕೈಯ್ಯಲ್ಲೊಂದು ದೊಣ್ಣೆ ಹಿಡಿದುಕೊಂಡು ನಾವು ದೇಶ ಕಾಪಾಡುತ್ತೇವೆ ಎಂದು ಹೇಳುವ ಮೂಲಕ ರಾಷ್ಟ್ರದಲ್ಲಿರುವ 50 ಲಕ್ಷ ಮಂದಿ ಸೈನಿಕರು, ಪೊಲೀಸರು, ಪ್ಯಾರಾ ಮಿಲಿಟ್ರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಆರ್ ಎಸ್ಎಸ್ ವಿರುದ್ಧ ವಿಧಾನ ಪರಿಷತ್ ವಿರೋಧಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಅವರು ತೀವ್ರ ವಾಗ್ದಾಳಿ ನಡೆಸಿದರು.
ಮಂಗಳೂರಿನಲ್ಲಿಂದು ಮಾತನಾಡಿದ ಅವರು, ಈ ರಾಷ್ಟ್ರವನ್ನು ರಕ್ಷಣೆ ಮಾಡಲು ಯೋಧರಿದ್ದಾರೆ. ಇವರು ಯಾವತ್ತೂ ರಾಷ್ಟ್ರ ರಕ್ಷಣೆಗೆ ಮುಂದೆ ನಿಂತಿರಲಿಲ್ಲ. ಧರ್ಮರಕ್ಷಣೆ ವಿಚಾರ ಬಂದಾಗಲೂ ಉಪನಿಷತ್ತು, ಭಗವದ್ಗೀತೆಯಲ್ಲಿ ಎಲ್ಲೂ ಕಾಕಿಚಡ್ಡಿ, ಕರಿಟೋಪಿಯ ಬಗ್ಗೆ ಉಲ್ಲೇಖವಿಲ್ಲ.
ಕಾಕಿಚಡ್ಡಿ, ಕರಿಟೋಪಿ ಕಾಷಸಿಗೋದು ಜರ್ಮನಿಯ ಹಿಟ್ಲರ್ ಆರ್ಮಿಯಲ್ಲಿ. ಇವರು ಅದನ್ನು ತೊಟ್ಟು ಹಿಂದೂ ಧರ್ಮವನ್ನು ರಕ್ಷಣೆ ಮಾಡುತ್ತೇನೆಂದು ಹೇಳುತ್ತಾರಲ್ಲ. ಇದು ಜನರ ಕಣ್ಣಿಗೆ ಮಣ್ಣೆರಚುವ ಕೆಲಸ. ಅವರ ಅಸ್ಮೆತೆಯನ್ನೇ ಕಾಪಾಡಲು ಅವರಿಗೆ ಆಗುತ್ತಿಲ್ಲ. ಅದರ ಮೇಲೆ ದೇಶ ಕಾಪಾಡಲು ಇವರಿಗೆ ಸಾಧ್ಯವಿದೆಯೇ. ಕಾಕಿಚಡ್ಡಿಯೆಂದರೆ ತ್ಯಾಗ-ಬಲಿದಾನಗಳ ಸಂಕೇತ ಎಂದು ಹೇಳುತ್ತಿದ್ದವರು ಈಗ ಪ್ಯಾಂಟ್ ಗೆ ಹೇಗೆ ಬಂದರು. ಅಧಿಕಾರ, 40% ಕಮಿಷನ್ ಬಂದಿದೆ ನೋಡಿ ಅದರಿಂದ ಪ್ಯಾಂಟ್, 10 ಲಕ್ಷ ರೂ. ಸೂಟ್ ಎಲ್ಲವೂ ಬರುತ್ತದೆ ಎಂದು ಲೇವಡಿ ಮಾಡಿದರು.
RSS ಹಿಂದಿ ಬೆಲ್ಟ್ ಬಿಟ್ಟು ಬೇರೆ ಎಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸಿದೆ. ದೇಶ ಬರೀ ಹಿಂದಿ ಬೆಲ್ಟ್ ಮಾತ್ರವಲ್ಲ, ದಕ್ಷಿಣ ಭಾರತ, ಪೂರ್ವ ಭಾರತ, ಪಶ್ಚಿಮ ಘಟ್ಟಗಳಲ್ಲೂ ಇದೆ. ಆದ್ದರಿಂದ ದೇಶ RSS ಚಿಂತನೆ ಮೇಲೆ ಮಾತ್ರ ನಿಂತಿಲ್ಲ. ಅವರು ಸ್ವಾತಂತ್ರ್ಯ ಹೋರಾಟಕ್ಕೆ ವಿರುದ್ಧವಿದ್ದವರು. ಆದ್ದರಿಂದ ಜನಸಾಮಾನ್ಯರಿಗೆ ತಿಳುವಳಿಕೆ ನೀಡಬೇಕಾಗಿದೆ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು.
PublicNext
07/06/2022 04:38 pm