ಮಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಕಾಮಾಲೆ ರೋಗ ಬಾಧೆಯಿದೆ ಎಂದು ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಜರೆದಿದ್ದಾರೆ.
ನಗರದ ಕೊಡಿಯಾಲ್ ಬೈಲ್ ನಲ್ಲಿರುವ ಅಟಲ್ ಕೇಂದ್ರದಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ಮೆಚ್ಚಿಸಲು, ಓಟ್ ಬ್ಯಾಂಕ್ ಗಾಗಿ ಆರ್ ಎಸ್ಎಸ್ ಅನ್ನು ಪದೇ ಪದೇ ದೂಷಿಸುತ್ತಿದ್ದಾರೆ. ಅವರ ಈ ಚಾಳಿಯನ್ನು ಬಿಜೆಪಿ ಖಂಡಿಸುತ್ತದೆ. ವ್ಯಕ್ತಿ, ಜಾತಿಯನ್ನು ಮೀರಿ ಆರ್ ಎಸ್ಎಸ್ ಸಂಘಟನೆ ಬೆಳೆದು ನಿಂತಿದೆ. ಸಂಘದ ಗರಡಿಯಲ್ಲಿಯೇ ಪಳಗಿರುವವರೇ ಇಂದು ಪ್ರಧಾನಮಂತ್ರಿ, ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಸ್ಪೀಕರ್ ಸ್ಥಾನದಲ್ಲಿದ್ದಾರೆ. ಆದ್ದರಿಂದ ಆರ್ ಎಸ್ಎಸ್ ಅನ್ನು ದುರ್ಬಲ ಸಂಘಟನೆ ಎಂದು ಹೇಳುವ ಸಿದ್ದರಾಮಯ್ಯ ಆತ್ಮಾವಲೋಕನ ಮಾಡುವುದು ಒಳಿತು ಎಂದು ಆಗ್ರಹಿಸಿದರು.
ಇತ್ತೀಚಿಗೆ ನಗರದ ಕಣ್ಣೂರಿನಲ್ಲಿ ನಡೆದ ಎಸ್ ಡಿಪಿಐ ಸಮಾವೇಶದಲ್ಲಿ ದಲಿತ ಸಮಾಜವನ್ನು ಗುರಿಯಾಗಿರಿಸಿಕೊಂಡು ಎಸ್ ಡಿಪಿಐ ಮುಖಂಡನೋರ್ವನು ಹೇಳಿಕೆ ನೀಡಿರುವುದನ್ನು ಬಿಜೆಪಿ ಖಂಡಿಸುತ್ತದೆ. ಈ ಮೂಲಕ ಎಸ್ ಡಿಪಿಐನ ನಿಜಬಣ್ಣ ಬಯಲಾಗಿದೆ. ಜಿಲ್ಲೆಯ ಜನತೆ ಜಾಗೃತರಾಗಿದ್ದು, ಮುಂದಿನ ದಿನಗಳಲ್ಲಿ ಉತ್ತರ ನೀಡಲಿದ್ದಾರೆ. ಎಂದು ಸುದರ್ಶನ ಮೂಡುಬಿದಿರೆ ಹೇಳಿದ್ದಾರೆ.
Kshetra Samachara
02/06/2022 05:45 pm