ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: 'ಕಾಂಗ್ರೆಸ್ ಗೂಂಡಾ ಪ್ರವೃತ್ತಿಗೆ ತಕ್ಕ ಉತ್ತರ ಕೊಡಲು ಬಿಜೆಪಿ ಕಾರ್ಯಕರ್ತರು ಸಮರ್ಥರಿದ್ದಾರೆ'

ಮಂಗಳೂರು: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮನೆ ಮೇಲೆ ದಾಳಿ‌ ನಡೆಸಿರುವ ಕಾಂಗ್ರೆಸ್‌ನ ಎನ್ಎಸ್‌ಯುಐ ಕಾರ್ಯಕರ್ತರ ಗೂಂಡಾ ಪ್ರವೃತ್ತಿಗೆ ತಕ್ಕ ಉತ್ತರವನ್ನು ಕೊಡಲು ಬಿಜೆಪಿ ಕಾರ್ಯಕರ್ತರು ಸಮರ್ಥರಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಮಂಗಳೂರಿನಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ ವೈಚಾರಿಕ ಹೋರಾಟದಲ್ಲಿ ಸೋತಿದ್ದು, ತನ್ನ ಮೂಲ ಸಂಸ್ಕೃತಿ ಗೂಂಡಾ ಪ್ರವೃತ್ತಿ ಮೆರೆಯುತ್ತಿದೆ. ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಬಳಿಕ ಹತಾಶರಾಗಿರುವ ಕಾಂಗ್ರೆಸ್ ಗಲಭಯನ್ನು ಮಾಡಿ, ಬೆಂಕಿ ಹಚ್ಚಿ ಕಲ್ಲು ತೂರಾಟ ಮಾಡುವ ಪ್ರವೃತ್ತಿಯಲ್ಲಿ ತೊಡಗಿದೆ. ಅವರದ್ದೇ ಶಾಸಕರಾಗಿರುವ ಅಖಂಡ‌ ಶ್ರೀನಿವಾಸ ಮನೆಗೆ ಬೆಂಕಿ ಹಚ್ಚುವ ಕೆಲಸವನ್ನು ಮಾಡಿದ್ದರು. ಇದನ್ನೆಲ್ಲಾ ಗಮನಿಸಿದಾಗ ಕಾಂಗ್ರೆಸ್ ಗೂಂಡಾ ಸಂಸ್ಕೃತಿ ಮತ್ತೆ ತಲೆ ಎತ್ತಿದೆ ಎಂದು ಕಂಡು ಬರುತ್ತದೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಕಾರದ ತಪ್ಪುಗಳ ವಿರುದ್ಧ ಹೋರಾಟ, ಆಂದೋಲನಗಳನ್ನು ಮಾಡುವುದು ವಿರೋಧ ಪಕ್ಷಗಳ ಪ್ರಕ್ರಿಯೆ. ಅದನ್ನು ಬಿಟ್ಟು ವೈಯಕ್ತಿಕ ದ್ವೇಷ ರಾಜಕಾರಣದ ರೀತಿ ಸಚಿವರ ಮನೆಗೆ ನುಗ್ಗಿ ಬಟ್ಟೆಗಳಿಗೆ ಬೆಂಕಿ ಹಚ್ಚಿದ್ದಾರೆ. ಪೊಲೀಸ್ ತಕ್ಷಣ ಬಂದು ನಿಯಂತ್ರಣ ಮಾಡಿ ತಕ್ಷಣ 15 ಮಂದಿಯನ್ನು ಬಂಧಿಸಿದ್ದಾರೆ. ಇದೊಂದು ವ್ಯವಸ್ಥಿತ ಷಡ್ಯಂತರ. ಕಾಂಗ್ರೆಸ್ ಸೋಲಿನ ಭೀತಿಯಲ್ಲಿದೆ‌. ಕಾಂಗ್ರೆಸ್ ನ ಈ ರೀತಿಯ ಸಂಸ್ಕೃತಿಗಳಿಂದ ಜನರು ಅವರನ್ನು ತಿರಸ್ಕರಿಸಿದ್ದಾರೆ. ಈ ಘಟನೆಯ ಹಿಂದೆ ಯಾರಿದ್ದಾರೆ, ಯಾರು ಪ್ರೇರಣೆ ನೀಡಿದ್ದಾರೋ ಅವರನ್ನು ತಕ್ಷಣ ಬಂಧಿಸಲು ಒತ್ತಾಯಿಸುತ್ತೇನೆ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.

Edited By : Nagesh Gaonkar
PublicNext

PublicNext

01/06/2022 10:14 pm

Cinque Terre

25.97 K

Cinque Terre

1

ಸಂಬಂಧಿತ ಸುದ್ದಿ