ಪುತ್ತೂರು: ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರ ಭ್ರಷ್ಟಾಚಾರದ ಜೊತೆಗೆ ಇದೀಗ ಶಿಕ್ಷಣದಲ್ಲೂ ಕೇಸರೀಕರಣವನ್ನು ಮಾಡುತ್ತಿದೆ ಎಂದು ದಕ್ಷಿಣಕನ್ನಡ ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು ಆರೋಪಿಸಿದರು.
ಪುತ್ತೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದೆ ಮಕ್ಕಳ ಪಠ್ಯಪುಸ್ತಕಗಳಲ್ಲಿ ಇದ್ದಂತಹ ಹಲವು ದಾರ್ಶನಿಕರ ಪಠ್ಯಗಳನ್ನು ಕೈಬಿಡುವ ಮೂಲಕ ಮಹಾನ್ ವ್ಯಕ್ತಿಗಳಿಗೆ ಅಗೌರವವನ್ನು ಮಾಡಿದೆ.ನಾರಾಯಣ ಗುರುಗಳ ಪಠ್ಯವನ್ನು ಪುಸ್ತಕದಿಙದ ತೆಗೆದು ಹಾಕಿರುವುದು ಖಂಡನೀಯ ಎಂದ ಅವರು ಆರ್ಎಸ್ಎಸ್‌ನ ಹೆಡಗೆವಾರ್ ಅವರ ಪಠ್ಯವನ್ನು ಸೇರಿಸುವ ಮೂಲಕ ಮಕ್ಕಳ ಪಠ್ಯ ಪುಸ್ತಕದಲ್ಲೂ ಕೇಸರೀಕರಣ ಮಾಡುತ್ತಿದೆ ಎಂದ ಅವರು ಬಿಜೆಪಿ ಸರಕಾರ ಬಂದ ಬಳಿಕ ಹಿಜಾಬ್, ಅಝಾನ್, ಧರ್ಮದಂಗಲ್ ಮೊದಲಾದ ಸಮಾಜವನ್ನು ಒಡೆಯುವ ಘಟನೆಗಳೇ ಹೆಚ್ಚಾಗುತ್ತಿದೆ ಎಂದು ಆರಾಒಪಿಸಿದ ಅವರು ಒಂದು ಕಡೆ ಸರಕಾರ ಪಠ್ಯದಲ್ಲಿ ಪರಿಷ್ಕರಣೆ ಮಾಡುತ್ತಿದ್ದರೆ, ಇನ್ನೊಂದು ಕಡೆ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡದೆ ಸತಾಯಿಸುತ್ತಿದೆ ಎಂದರು.
Kshetra Samachara
30/05/2022 01:13 pm