ಮಂಗಳೂರು: ಕೆಜಿಎಫ್ ಸಿನಿಮಾದ ರಾಕಿ ಭಾಯ್‌ನ ಫೇಮಸ್ ಡೈಲಾಗ್ 'ವೈಲೆನ್ಸ್.. ವೈಲೆನ್ಸ್... ವೈಲೆನ್ಸ್....' ಸ್ಟೈಲ್‌ನಲ್ಲಿಯೇ ಎಸ್‌ಡಿಪಿಐ ಮುಖಂಡ ರಿಯಾಜ್ ಫರಂಗಿಪೇಟೆ ಆರ್‌ಎಸ್ಎಸ್‌ಗೆ ಎಚ್ಚರಿಕೆ ನೀಡಿದ್ದಾರೆ. ಇದೀಗ ಈ ವೀಡಿಯೋ ಎಲ್ಲಡೆ ವೈರಲ್ ಆಗಿ ಸದ್ದು ಮಾಡುತ್ತಿದೆ.
ನಿನ್ನೆ ನಗರದ ಹೊರವಲಯದಲ್ಲಿರುವ ಎಸ್ ಡಿಪಿಐನ ಜನಾಧಿಕಾರ ಸಮಾವೇಶದಲ್ಲಿ ಮಾತನಾಡಿದ ಎಸ್‌ಡಿಪಿಐ ಮುಖಂಡ ರಿಯಾಜ್ ಫರಂಗಿಪೇಟೆ ರಾಕಿ ಬಾಯ್ ಸ್ಟೈಲ್ ನಲ್ಲಿಯೇ ವಾರ್ನಿಂಗ್ ನೀಡಿದ್ದಾರೆ. 'ವೈಲೆನ್ಸ್.. ವೈಲೆನ್ಸ್... ವೈಲೆನ್ಸ್.... ವಿ ಡೋಂಟ್ ಲೈಕ್ ಇಟ್. ವಿ ಅವಾಯ್ಡ್, ಬಟ್ ವೈಲೆನ್ಸ್ ಲೈಕ್ಸ್ ಅಸ್. ವಿ ಕಾಂಟ್ ಅವಾಯ್ಡ್' ಎಂದು ಫಿಲ್ಮಿ ಸ್ಟೈಲ್‌ನಲ್ಲಿ ಡೈಲಾಗ್ ಹೊಡೆದು ಎಚ್ಚರಿಕೆ ನೀಡಿದ್ದಾರೆ.
ಇದೀಗ ಈ ವೈಲೆನ್ಸ್ ಡೈಲಾಗ್ ವೀಡಿಯೋ ಭಾರೀ ವೈರಲ್ ಆಗುತ್ತಿದೆ. ಈ ಹಿಂದೆಯೂ ರಿಯಾಜ್ ಫರಂಗಿಪೇಟೆಯವರ 'ನೀ ತಾಂಟ್ರೆ.. ಬಾ ತಾಂಟ್' ಡೈಲಾಗ್ ಕೂಡಾ ಭಾರೀ ಟ್ರೋಲ್ ಗೆ ಒಳಗಾಗಿತ್ತು.
PublicNext
28/05/2022 08:06 pm