ಉಡುಪಿ: ರಾಜ್ಯದ ಬಹುತೇಕ ಸಚಿವರ ಮೇಲೆ ಭ್ರಷ್ಟಾಚಾರ ಆರೋಪವಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆಮ್ ಆದ್ಮ ಪಕ್ಷವು ದೇಶ ಹಾಗೂ ರಾಜ್ಯದಲ್ಲಿ ಭ್ರಷ್ಟಾಚಾರವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಆಮ್ ಆದ್ಮ ಪಾರ್ಟಿಯ ಕರಾವಳಿ ಜಿಲ್ಲೆಗಳ ಉಸ್ತುವಾರಿ ಕೆ.ಮಥಾಯಿ ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ಎಲ್ಲ ನೇಮಕಾತಿಯಲ್ಲೂ ಭ್ರಷ್ಟಾಚಾರ ನಡೆದಿದೆ. ಹಿಂದೆಂದೂ ಕೇಳಿ ಕಂಡರಿಯದ ರೀತಿಯಲ್ಲಿ ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಸರಕಾರ ಹಾಗೂ ಮಂತ್ರಿಗಳ ಮೇಲೆ ಹಿಡಿತ ಇಲ್ಲ. ಒಂದು ಸಚಿವಾಲಯವನ್ನೇ ಲೂಟಿ ಮಾಡಲು ವಹಿಸಿಕೊಡಲಾಗಿದೆ ಎಂದು ಆರೋಪಿಸಿದರು.
ಹಿಂದೆ ಇದ್ದ 10% 20% ಈಗ ಬಿಬಿಎಂಪಿಯಲ್ಲಿ 50% ಕಮಿಷನ್ ವರೆಗೂ ತಲುಪಿದೆ. ಆಮ್ ಆದ್ಮಿ ಒಂದು ರಾಜಕೀಯ ಪಕ್ಷವಾಗಿಯಲ್ಲದೆ ಸೇವಾ ಸಂಘಟನೆಯಾಗಿ ಬೆಳೆಯುತ್ತಿದೆ. ನಾವು ಶಿಕ್ಷಣ, ಆಸ್ಪತ್ರೆ ಇತ್ಯಾದಿಗಳನ್ನು ಜನತೆಗೆ ಸೇವೆಯಾಗಿ ನೀಡಲಿದ್ದೇವೆ. ಕರಾವಳಿಯಲ್ಲಿ ಪಕ್ಷವನ್ನು ಬಲಪಡಿಸುವುದು ನಮ್ಮ ಗುರಿ ಎಂದರು.
Kshetra Samachara
28/05/2022 04:39 pm