ಪುತ್ತೂರು: ಕೇರಳದ ತಿರುವನಂತಪುರದಲ್ಲಿ ನಡೆದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರ‍್ಯಾಲಿಯಲ್ಲಿ ಬಾಲಕನೋರ್ವನ ವಿವಾದಾತ್ಮಕ ಘೋಷಣೆಗೆ ಎಸ್.ಡಿ.ಪಿ.ಐ ಪಕ್ಷ ತನ್ನದೇ ಆದ ಸ್ಪಷ್ಟನೆಯನ್ನು ನೀಡಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿದ ಎಸ್.ಡಿ.ಪಿ.ಐ ಮುಖಂಡ ಇಕ್ಬಾಲ್ ಬೆಳ್ಳಾರೆ ಬಾಲಕ ತನ್ನ ಘೋಷಣೆಯಲ್ಲಿ ಆರ್.ಎಸ್.ಎಸ್ ನ ಗೋಳ್ವಾಡ್ಕರ್ ತನ್ನ ಪುಸ್ತಕದಲ್ಲಿ ಬರೆದ ವಿಚಾರವನ್ನು ಪ್ರಸ್ತಾಪಿಸಿದ್ದಾನೆ ಎಂದಿದ್ದಾರೆ.
ಗೋಳ್ವಾಡ್ಕರ್ ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಭಾರತದಲ್ಲಿರುವ ಕ್ರಿಶ್ಚಿಯನ್, ಮುಸ್ಲಿಂ, ದಲಿತ ಹಾಗೂ ಕಮ್ಯುನಿಸ್ಟರನ್ನು ಹೊರ ಹಾಕಬೇಕೆಂದಿದ್ದಾರೆ. ಇದನ್ನೇ ಬಾಲಕ ಹೇಳಿದ್ದಾನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ರ‍್ಯಾಲಿಯಲ್ಲಿ ಬಾಲಕನ ಘೋಷಣೆಯಲ್ಲಿ ಕ್ರೈಸ್ತರು, ಹಿಂದೂಗಳು ಅಂತ್ಯಕ್ರಿಯೆಗೆ ಸಜ್ಜಾಗಿ, ಹಿಂದೂಗಳು ತಮ್ಮ ಅಂತ್ಯಕ್ರಿಯೆಗೆ ಅಕ್ಕಿ ಸಿದ್ಧವಿಡಿ, ಕ್ರೈಸ್ತರು ಸಾಂಬ್ರಾಣಿ ಮತ್ತು ಧೂಪ ರೆಡಿ ಮಾಡಿ ಇಡಿ ಎನ್ನುವ ಘೋಷಣೆ ಕೂಗಿರುವುದು ಸ್ಪಷ್ಟವಾಗಿ ಕೇಳಿ ಬರುತ್ತಿದೆ.
ನೀವು ಯೋಗ್ಯ ರೀತಿಯಲ್ಲಿ ಬದುಕಿದರೆ ನಮ್ಮ ಭೂಮಿಯಲ್ಲಿ ಬದುಕಬಹುದು, ಒಂದು ವೇಳೆ ನೀವು ನ್ಯಾಯವಾಗಿ ಬದುಕದಿದ್ದರೆ ನಮಗೆ ಅಜಾದಿ ಅಂದರೆ ಏನು ಎಂದು ಗೊತ್ತಿದೆ ಎನ್ನುವ ವಿಚಾರವನ್ನೂ ಘೋಷಣೆಯ ಮೂಲಕ ಕೂಗಲಾಗಿತ್ತು.
Kshetra Samachara
24/05/2022 03:32 pm