ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ತೆಗೆದು ಹಾಕಿದವರು ದೇಶದ್ರೋಹಿಗಳು; ಖಾದರ್ ಕಿಡಿ

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ಎಸ್ಎಸ್ಎಲ್ ಸಿ ಪಠ್ಯಪುಸ್ತಕದಿಂದ ತೆಗೆದು ಹಾಕಿದವರು ಸಮಾಜ ದ್ರೋಹಿಗಳು, ದೇಶ ದ್ರೋಹಿಗಳು ಎಂದು ಮಂಗಳೂರಿನಲ್ಲಿ ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ ಖಾದರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಾರಾಯಣ ಗುರುಗಳ ಪಠ್ಯವನ್ನು ಪುಸ್ತಕದಲ್ಲಿ ಅಳವಡಿಸದೆ ಮತ್ತೆ ಸಮಾಜ ಇಬ್ಭಾಗ ಮಾಡುವಂತವರ ಪ್ರಮೋದ್ ಮುತಾಲಿಕ್ ರಂಥವರ ಪಠ್ಯವನ್ನು ಕಲಿಸಬೇಕೇ ಎಂದು ಪ್ರಶ್ನಿಸಿದ ಅವರು, ಯುವಜನರಿಗೆ ನೀವು ಯಾವ ಪಾಠ ಕೊಡುತ್ತೀರಿ.‌ ದೇಶದ ಭವಿಷ್ಯವಾದ ವಿದ್ಯಾರ್ಥಿಗಳ ಮನಸ್ಥಿತಿಯನ್ನು ಎಲ್ಲಿಗೆ ತಂದು ನಿಲ್ಲಿಸುತ್ತೀರಿ ಎಂದು ಕಿಡಿಕಾರಿದರು.

ಬ್ರಿಟಿಷರಿಗೆ ತಪ್ಪೊಪ್ಪಿಗೆ ಬರೆದವರ ಪಾಠ ಸೇರಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ನಾರಾಯಣ ಗುರುಗಳ ಪಠ್ಯವನ್ನು ತೆಗೆದಿಲ್ಲ ಎಂದಾದರೆ ಪಠ್ಯಪುಸ್ತಕ ತಂದು‌ ತೋರಿಸಲಿ. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸುನೀಲ್ ಕುಮಾರ್ ಅಧಿಕಾರಕ್ಕೆ, ಹೈಕಮಾಂಡ್, ಸಂಘಕ್ಕೆ ಹೆದರುತ್ತಿದ್ದಾರೆ. ಅದಕ್ಕಾಗಿ ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಬದಿಗಿಡುವ ಕೆಲಸ ಮಾಡುತ್ತಿದ್ದಾರೆ. ಇವರಿಬ್ಬರ ಮಾತನ್ನು ಕರಾವಳಿಯ ಜನ ಒಪ್ಪುವುದಿಲ್ಲ. ಸಚಿವರು, ಶಿಕ್ಷಣ ಸಚಿವರು, ಸಂಘ ಸಂಸ್ಥೆಗಳ ಪ್ರಮುಖರನ್ನು ಕರೆಸಿ ಸ್ಪಷ್ಟನೆ ನೀಡಲಿ. ಕುಳಿತು ಚರ್ಚೆ ಮಾಡಿ ಆಗಿರುವ ಲೋಪಗಳ ಬಗ್ಗೆ ತಿಳಿಸಿ ತಿದ್ದಿಕೊಳ್ಳಲಿ ಎಂದು ಯು.ಟಿ ಖಾದರ್ ಹೇಳಿದರು.

Edited By : Manjunath H D
Kshetra Samachara

Kshetra Samachara

20/05/2022 11:24 pm

Cinque Terre

16.93 K

Cinque Terre

4

ಸಂಬಂಧಿತ ಸುದ್ದಿ