ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸಂವಿಧಾನದ ಮೇಲೂ ಬುಲ್ಡೋಜರ್ ಆಕ್ರಮಣ; "ನಾವು ಸೌಹಾರ್ದ ಸೌಧ ಕಟ್ಟೋಣ"

ಉಡುಪಿ: ಈ ದೇಶದ ಕಟ್ಟಡಗಳ ಮೇಲೆ ಮಾತ್ರವಲ್ಲ, ಸಂವಿಧಾನದ ಮೇಲೂ ಬುಲ್ಡೋಜರ್ ಚಲಾಯಿಸಲಾತ್ತಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರ ಯೋಗೇಂದ್ರ ಯಾದವ್ ಹೇಳಿದ್ದಾರೆ. ಉಡುಪಿಯಲ್ಲಿ ನಡೆದ ರಾಜ್ಯಮಟ್ಟದ ʼಸಹಬಾಳ್ವೆʼ ಸಮಾವೇಶದ ಪ್ರಮುಖ ಭಾಷಣಕಾರರಾಗಿ ಅವರು ಮಾತನಾಡಿದರು.

ಉಡುಪಿಯಿಂದಲೇ ದ್ವೇಷದ ಸಂದೇಶ ಹೊರಟಿತು. ಕರಾವಳಿಯಲ್ಲಿ ಏನು ಬಿತ್ತಿದರೂ ಉತ್ತಮ ಫಸಲು ನೀಡುತ್ತೆ, ಬಂಗಾರದ ಬೆಳೆ ಸಿಗುತ್ತೆ. ಹಾಗಾಗಿ ಕೆಲವರು ದ್ವೇಷದ ಬೀಜ ಬಿತ್ತಿದ್ದಾರೆ. ಆದರೆ, ಕರ್ನಾಟಕದಲ್ಲಿ ದ್ವೇಷದ ಬೀಜದಿಂದ ಫಸಲು ಹುಟ್ಟುವುದಿಲ್ಲ ಎಂದರು.

ಅವರು ಮಂದಿರ ಇಲ್ಲೇ ಮಾಡ್ತೇವೆ ಅಂತಾರೆ. ನಾವು ಸೌಹಾರ್ದ ಇಲ್ಲಿಂದಲೇ ಆರಂಭ ಅನ್ನೋಣ. ಅವರು ಒಡೆಯುತ್ತಾರೆ, ನಾವು‌ ಜೋಡಿಸೋಣ... ಹಿಂದಿ ರಾಷ್ಟ್ರ ಭಾಷೆ ಎನ್ನುತ್ತಾರೆ. ಆದರೆ, ಕನ್ನಡ ಹಿಂದಿಗಿಂತಲೂ ಪುರಾತನ ಭಾಷೆ. ಹಿಂದಿ ಈ ದೇಶದ ಮಾಲೀಕ ಆಗಲು ಸಾಧ್ಯವಿಲ್ಲ ಎಂದು ಹೇಳಿದರು.

ದೇಶಪ್ರೇಮ, ದೇಶದ್ರೋಹದ ಬಗ್ಗೆ ದೇಶದಲ್ಲಿ ಬಹಳ ಚರ್ಚೆಯಾಗುತ್ತಿದೆ. ಈ ದೇಶದ ಜನರನ್ನು‌ ಜೋಡಿಸುವವನೇ ದೇಶಪ್ರೇಮಿ.

ದ್ವೇಷ, ಕಲಹ ಮಾಡಿಸುವಾತನೇ ದೇಶದ್ರೋಹಿ ಎಂದರು. ಸಮಾವೇಶದಲ್ಲಿ ಸರ್ವ ಧರ್ಮಗಳ ಧಾರ್ಮಿಕ ಗುರುಗಳು ಸೌಹಾರ್ದ ಸಂದೇಶ ನೀಡಿದರು.

Edited By : Manjunath H D
Kshetra Samachara

Kshetra Samachara

14/05/2022 10:31 pm

Cinque Terre

7.19 K

Cinque Terre

1

ಸಂಬಂಧಿತ ಸುದ್ದಿ