ಉಡುಪಿ: ನಗರದ ಖಾಸಗಿ ಹೋಟೆಲ್ ಕಿದಿಯೂರ್ ನಲ್ಲಿ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ ನಡೆಯುತ್ತಿದ್ದು ,ಸಭೆಯನ್ನು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು.
ಉದ್ಘಾಟನೆಗೂ ಮುನ್ನ ಹಿಂದುಳಿದ ಕೊರಗ ಮಹಿಳೆಗೆ ಮನೆ ಹಸ್ತಾಂತರ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಂದಿನ ವರ್ಷ ರಾಜ್ಯದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಪದಾಧಿಕಾರಿಗಳ ಸಭೆ ಮಹತ್ವ ಪಡೆದುಕೊಂಡಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ 75ಕ್ಕೂ ಅಧಿಕ ಪದಾಧಿಕಾರಿಗಳು ಭಾಗಿಯಾಗಿದ್ದು ,ಸಭೆ ಸಂಜೆಯವರೆಗೂ ನಡೆಯಲಿದೆ.ರಾಜ್ಯದಲ್ಲಿ ಟಾರ್ಗೆಟ್ 150 ತಲುಪುವ ಬಗ್ಗೆ ಮಹತ್ವದ ಚರ್ಚೆಯಾಗುತ್ತಿದೆ.
ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಯಾದ ಪ್ರಮೋದ್ ಮಧ್ವರಾಜ್ ,ಬಿ.ವೈ ರಾಘವೇಂದ್ರ ,ಸಚಿವ ಸುನಿಲ್ ಕುಮಾರ್ ,ಉಸ್ತುವಾರಿ ಸಚಿವ ಅಂಗಾರ ಸಹಿತ ರಾಜ್ಯ ನಾಯಕರು ಸಭೆಯಲ್ಲಿ ಭಾಗಿಯಾಗಿದ್ದಾರೆ.
Kshetra Samachara
10/05/2022 01:00 pm