ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಆಝಾನ್ ವಿಚಾರ: ಸಂವಿಧಾನದ ವ್ಯಾಪ್ತಿಯಲ್ಲಿ ಮುತಾಲಿಕ್ ಬೇಡಿಕೆ ಈಡೇರಿಸ್ತೇವೆ: ನಳಿನ್ ಕುಮಾರ್ ಕಟೀಲ್

ಉಡುಪಿ: ಆಜಾನ್ ವಿರುದ್ದ ಮುತಾಲಿಕ್ ಹೋರಾಟ ವಿಚಾರವಾಗಿ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ,ಆಝಾನ್ ಕುರಿತು ನ್ಯಾಯಾಲಯದ ತೀರ್ಪಿನಂತೆ ಕ್ರಮ‌ ಕೈಗೊಳ್ಳಲಾಗುತ್ತದೆ.ಸರಕಾರ, ಸಾಂವಿಧಾನಿಕ ಜವಾಬ್ದಾರಿ ಬೇರೆ, ಹೋರಾಟಗಾರರ ಮನೋಭಾವನೆ ಬೇರೆ.ಸಂಘಟನಾತ್ಮಕವಾಗಿ ನಾವು ಹೇಳಿದಾಗ ಸರಕಾರ ಎಲ್ಲವನ್ನೂ ಮಾಡಲು ಸಾಧ್ಯವಾಗಲ್ಲ.ಮುತಾಲಿಕ್ ಸಹಜವಾದ ಅಪೇಕ್ಷೆಗಳನ್ನು ವ್ಯಕ್ತಪಡಿಸಿದ್ದಾರೆ.ಸಂವಿಧಾನದಡಿಯಲ್ಲಿ ಮುತಾಲಿಕರ ಯಾವ ಅಪೇಕ್ಷೆ ಪೂರೈಸಲು ಸಾಧ್ಯವೋ ಅದನ್ನು ಪೂರೈಸುತ್ತೇವೆ.ಸಂವಿಧಾನಾತ್ಮಕವಾಗಿ ಕಾನೂನಿನ ಕೆಲವು ಅಡೆತಡೆಗಳಿವೆ.ಎಲ್ಲವನ್ನೂ ಗಮನಿಸಿ ಸರಕಾರ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ ಎಂದು ಹೇಳಿದ್ದಾರೆ.ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು , ಮುಂದಿನ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 150 ಪ್ಲಸ್ ಸ್ಥಾನಗಳನ್ನು ಗಳಿಸಲಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

Edited By : Manjunath H D
PublicNext

PublicNext

10/05/2022 12:47 pm

Cinque Terre

33.61 K

Cinque Terre

0

ಸಂಬಂಧಿತ ಸುದ್ದಿ