ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: 'ಪಾಕ್‌ ಪರ ಘೋಷಣೆ ಕೇಸ್‌- ಎನ್‌ಐಎ ತನಿಖೆಯಿಂದ ಸತ್ಯ ಹೊರಬರಲಿದೆ'

ಬ್ರಹ್ಮಾವರ: ರಾಜ್ಯದ ಹಲವು ಗಲಭೆ ಮತ್ತು ಪಾಕಿಸ್ತಾನ ಜಿಂದಾಬಾದ್ ಕೂಗಿದ ವಿಚಾರವಾಗಿ ಎಲ್ಲ ಘಟನೆಗಳ ಎನ್‌ಐಎ ತನಿಖೆ ಆಗುತ್ತಿದ್ದು, ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ಆಗಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಜಿಲ್ಲೆಯ ಬ್ರಹ್ಮಾವರದ ನೀಲಾವರದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.ಪಾಕಿಸ್ಥಾನ ಪರ ಘೋಷಣೆ ಕೂಗಿದ್ದರ ಹಿಂದಿರುವ ಷಡ್ಯಂತ್ರ ಮತ್ತು ಇದಕ್ಕೆ ಇರುವ ಬೆಂಬಲ ಯಾರು ಎಂಬುದು ತನಿಖೆ ಆಗಲಿದೆ.ಈ ರೀತಿ ಚಟುವಟಿಕೆ ಮಾಡುವವರಿಗೆ ಯಾವ ದೇಶದ ಬೆಂಬಲ ಇದೆ? ನಮ್ಮ ದೇಶದವರ ಬೆಂಬಲ ಇದ್ದರೆ ಅದು ಯಾರು ಎಂಬ ಬಗ್ಗೆ ಎನ್ ಐ ಎ ತನಿಖೆ ಆಗಲಿದೆ ಮತ್ತು ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ಆಗಲಿದೆ ಎಂದು ಸಚಿವರು ಹೇಳಿದ್ದಾರೆ.

Edited By : Manjunath H D
PublicNext

PublicNext

07/05/2022 06:51 pm

Cinque Terre

26.61 K

Cinque Terre

4

ಸಂಬಂಧಿತ ಸುದ್ದಿ