ಉಡುಪಿ: ಪ್ರಮೋದ್ ಮಧ್ವರಾಜ್ ಇವತ್ತು ಕೈ ಗೆ ರಾಜೀನಾಮೆ ನೀಡಿದ ಒಂದು ಗಂಟೆಯಲ್ಲೇ ಬಿಜೆಪಿಗೆ ಅಧಿಕೃತವಾಗಿಸೇರ್ಪಡೆಗೊಂಡಿದ್ದಾರೆ. ಬೆಂಗಳೂರಿನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಬಿಜೆಪಿಯ ಧ್ವಜ ಪಡೆದು ಕಮಲ ಪಡೆ ಸೇರಿಕೊಂಡಿದ್ದಾರೆ.
ಶುಕ್ರವಾರವಷ್ಟೆ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರು ಬಿಜೆಪಿ ಸೇರ್ಪಡೆಗೊಳ್ಳಲು ಪ್ರಮೋದ್ ಮಧ್ವರಾಜ್ ಗೆ ಜಿಲ್ಲಾ ಬಿಜೆಪಿ ಗ್ರೀನ್ ಸಿಗ್ನಲ್ ನೀಡಿದೆ ಎಂದಿದ್ದರು.ಇದರ ಬೆನ್ನಲ್ಲೇ ಪ್ರಮೋದ್ ಮಧ್ವರಾಜ್ ನನ್ನ ಬಳಿ ಯಾವುದೇ ಮಾಹಿತಿ ಇಲ್ಲ, ನನಗೆ ಮಾಹಿತಿ ಬಂದ ನಂತರ ನಿಮಗೆಲ್ಲ ಮಾಹಿತಿ ನೀಡುವೆ ಎಂದು ಪತ್ರಕರ್ತರಿಗೆ ಶುಕ್ರವಾರ ಸಂಜೆ ಮಲ್ಪೆಯಲ್ಲಿ ಉತ್ತರಿಸಿದ್ದರು.ಇದು ಹೇಳಿದ ಮರುದಿನವೇ ಕೈ ಗೆ ರಾಜೀನಾಮೆ ನೀಡಿ ಕಮಲ ಪಡೆ ಸೇರಿಕೊಂಡಿದ್ದಾರೆ.
Kshetra Samachara
07/05/2022 06:39 pm