ಮಂಗಳೂರು: ಬಿಜೆಪಿ ಶಾಸಕ ಯತ್ನಾಳ್ ಹೇಳಿಕೆಗೆ ಮಂಗಳೂರಲ್ಲಿ ಕಾಂಗ್ರೆಸ್ ಶಾಸಕ ಯುಟಿ ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ. ಮಂಗಳೂರು ನಗರದ ಮಲ್ಲಿಕಟ್ಟೆಯಲ್ಲಿರೋ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯತ್ನಾಳ್ ಅವರು ಸಿಎಂ ಸ್ಥಾನದ ಬೆಲೆ ಪ್ರಕಟಿಸಿದ್ದಾರೆ.
ಇದು ಕರ್ನಾಟಕದ ಜನತೆಗೆ ಮಾಡಿದ ಅವಮಾನ. ಜನಸಾಮಾನ್ಯರ ಎಲ್ಲಾ ನಿರೀಕ್ಷೆಯಲ್ಲಿ ಬಿಜೆಪಿ ವಿಫಲ ಆಗಿದೆ. ಇವ್ರ ವೈಫಲ್ಯ ಮರೆಮಾಚಲು ಇಲ್ಲ ಸಲ್ಲದ ಗೊಂದಲ್ಲಕೆ ಬಿಜೆಪಿ ಮುಂದಾಗಿದೆ. ಇದ್ರಲ್ಲಿ ಬಿಜೆಪಿ ಮತ್ತು ಅದ್ರ ಅಂಗ ಸಂಸ್ಥೆಗಳು ಸಕ್ರೀಯವಾಗಿ ಕಾರ್ಯ ಮಾಡ್ತಾ ಇದೆ ಎಂದರು.
ಇನ್ನು ಮಾಜಿ ಸಚಿವ ಪ್ರಮೋದ್ ಮದ್ವರಾಜ್ ಬಿಜೆಪಿ ಸೇರ್ತಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಗೆ ಮುಂದೆ ಗೆಲ್ಲುವುದಕ್ಕೆ ಆಗೋದಿಲ್ಲ ಅನ್ನೋದು ಎಂದು ಗೊತ್ತಾಗಿದೆ. ಅದಕ್ಕೆ ಕಾಂಗ್ರೆಸ್ ನಿಂದ ಅಭ್ಯರ್ಥಿಗಳನ್ನು ಕರೆಯುತ್ತಿದ್ದಾರೆ ಎಂದರು.
ಇನ್ನು ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ಮುತಾಲಿಕ್ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆ ನಮಗೆ ಮುಖ್ಯ. ಪೊಲೀಸ್ ಆಯುಕ್ತರ ಕಚೇರಿಗೆ ಯಾರು ಹೋಗ್ತಾರೆ ಯಾರು ಬರ್ತಾರೆ ಎಂಬುದು ಬೇಡ. ಇಲ್ಲ ಸಲ್ಲದ ಸುಳ್ಳು ಆರೋಪ ಎಲ್ಲೋ ಕೂತು ಹಾಕೋದಲ್ಲ.
ಪೊಲೀಸ್ ಆಯುಕ್ತರ ಕಚೇರಿಗೆ ಯಾರು ಬೇಕಾದರೂ ಹೋಗಿ ಮಾತನಾಡಬಹುದು. ಅದ್ರ ಬಗ್ಗೆ ಅಪಪ್ರಾಚಾರ ಮಾಡಿ ಅಧಿಕಾರಿಗಳ ಮೇಲೆ ಅಪನಂಬಿಕೆ ಮೂಡಿಸುವುದು ಸರಿಯಲ್ಲ. ಅಧಿಕಾರಿಗಳ ಬಗ್ಗೆ ಬರೆದು ಹಾಕೋರು ಎಲ್ಲೋ ಕೂತು ಬರೀತಾರೆ. ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆ ನಮಗೆ ಮುಖ್ಯ. ಎಲ್ಲೋ ಕೂತು ಬರೆಯುವವರು ನೇರವಾಗಿ ಅವರ ಕಚೇರಿಗೆ ಹೋಗಿ ಮಾತುಕಥೆ ಮಾಡಲಿ ಎಂದು ಮಂಗಳೂರು ಪೊಲೀಸ್ ಆಯುಕ್ತ ವಿರುದ್ಧ ಬರೆದವರ ವಿರುದ್ಧ ಖಾದರ್ ಗರಂ ಆದ್ರು.
ಇನ್ನು ಸಾಮಾಜಿಕ ಜಾಲತಾಣದ ಮೂಲಕ ಸಮಾಜದಲ್ಲಿ ಗೊಂದಲ, ವೈಮನಸ್ಸು ಸೃಷ್ಟಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಯುಟಿ ಖಾದರ್, ಈ ರೀತಿಯ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ. ಜಿಲ್ಲಾಡಳಿತ ಪೊಲೀಸ್ ಇಲಾಖೆ ಸರ್ಕಾರ ಇದ್ರ ಬಗ್ಗೆ ಕ್ರಮ ಕೈಗೊಳ್ಳಲಿ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ ಡಿಫೆನ್ಸ್ ಪೋರ್ಸ್ ನಿಂದ ಶಾಂತಿ ಕದಡುವ ಕೃತ್ಯ. ಈ ರೀತಿಯ ಕೃತ್ಯ ಮಾಡಿದ್ರೆ ಕಠಿಣ ಕ್ರಮ ಕೈಗೊಳ್ಳಿ. ಯಾರು ಇದ್ರ ಹಿಂದೆ ಇದ್ದಾರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿ. ಯಾವುದೇ ವಿಳಾಸ ಇಲ್ಲದೆ ಯಾವುದೇ ವಿಚಾರ ಇಲ್ಲದೆ ಈ ಕೃತ್ಯ ಮಾಡ್ತಾ ಇದ್ದಾರೆ. ಯಾರ ಯಾರ ಹೆಸರಿನಲ್ಲಿ ಈ ರೀತಿಯ ಕೃತ್ಯ ಮಾಡಲಾಗಿದೆ. ಈ ಕೃತ್ಯಗಳಿಗೆ ಸರ್ಕಾರ ಕಡಿವಾಣ ಹಾಕಬೇಕಿದೆ. ಈ ಕೃತ್ಯಗಳ ನಿರ್ಲಕ್ಷ್ಯ ಸಮಾಜಕ್ಕೆ ಮಾಡುವ ದ್ರೋಹ. ಈ ಬಗ್ಗೆ ಸರ್ಕಾರ ಜಾಗೃತಿ ಆಗಬೇಕಿದೆ ಎಂದ ಅವರು, ಜಿಲ್ಲೆಯ ಉಸ್ತುವಾರಿ ಸಚಿವರು ಎಲ್ಲಿದ್ದಾರೆ ಏನ್ ಮಾಡ್ತಾ ಇದ್ದಾರೆ. ನಾವು ಉಸ್ತುವಾರಿ ಆಗಿದ್ದಾಗ ಇದ್ರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು ಎಂದರು.
PublicNext
07/05/2022 03:05 pm