ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: 'ಕೈ'ಗೆ ಆಘಾತ.! 'ಕಮಲ' ಹಿಡಿಯಲು ಪ್ರಮೋದ್ ಮಧ್ವರಾಜ್‌ಗೆ ಗ್ರೀನ್ ಸಿಗ್ನಲ್

ಉಡುಪಿ: ಮಾಜಿ ಸಚಿವ, ಕಾಂಗ್ರೆಸ್ ನಾಯಕ ಪ್ರಮೋದ್ ಮಧ್ವರಾಜ್‌ಗೆ ಬಿಜೆಪಿಗೆ ಸೇರಲು ಇದ್ದ ಇಡೆತಡೆಗಳು ನಿವಾರಣೆಯಾಗಿವೆ. ಜಿಲ್ಲಾ ಬಿಜೆಪಿಯಿಂದ ಅವರು ಬಿಜೆಪಿಗೆ ಸೇರ್ಪಡೆಯಾಗಲು ಗ್ರೀನ್ ಸಿಗ್ನಲ್ ಸಿಕ್ಕಿದ್ದು, ರಾಜ್ಯ ನಾಯಕರ ಒಪ್ಪಿಗೆಯಷ್ಟೇ ಬಾಕಿ ಉಳಿದಿದೆ.

ಇವತ್ತು‌ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆ ಬಗ್ಗೆ ಹಲವು ಸುತ್ತಿನ ಮಾತುಕತೆಗಳಾಗಿವೆ. ಜಿಲ್ಲಾ ಬಿಜೆಪಿಯಿಂದ ಒಪ್ಪಿಗೆ ಸೂಚಿಸಿ ನಿರ್ಣಯ ಮಾಡಿ ರಾಜ್ಯ ನಾಯಕರಿಗೆ ಕಳಿಸಿದ್ದೇವೆ. ರಾಜ್ಯ ನಾಯಕರ ಒಪ್ಪಿಗೆಗಾಗಿ ಕಾಯಲಾಗುತ್ತಿದೆ ಎಂದು ಹೇಳಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಪ್ರಮೋದ್ ಬಿಜೆಪಿಗೆ ಸೇರ್ಪಡೆಯಾಗಲು ಹರಸಾಹಸ ಪಡುತ್ತಿದ್ದು, ಇತ್ತ ಕೈ ಕಾರ್ಯಕ್ರಮಗಳಲ್ಲೂ ಭಾಗವಹಿಸದೆ ಕಾರ್ಯಕರ್ತರಲ್ಲಿ ಭ್ರಮನಿರಸನ ಉಂಟು ಮಾಡಿದ್ದರು.

ಸ್ಲಗ್: ಜಿಲ್ಲಾ ಬಿಜೆಪಿಯಿಂದ ಗ್ರೀನ್ ಸಿಗ್ನಲ್!

Edited By : Shivu K
PublicNext

PublicNext

06/05/2022 04:27 pm

Cinque Terre

37.83 K

Cinque Terre

5

ಸಂಬಂಧಿತ ಸುದ್ದಿ