ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರಿನ ರಸ್ತೆಗೆ ಕೇಂದ್ರದ ಮಾಜಿ ಸಚಿವ ಜಾರ್ಜ್ ಫರ್ನಾಂಡೀಸ್ ಹೆಸರಿಡಲು ಒತ್ತಾಯ

ಮಂಗಳೂರು: ಹಿರಿಯ ರಾಜಕೀಯ ಮುತ್ಸದ್ದಿ, ಕೇಂದ್ರ ಸಚಿವ ಸಂಪುಟದಲ್ಲಿ ಸಂವಹನ, ಕೈಗಾರಿಕೆ, ರೈಲ್ವೆ ಹಾಗೂ ರಕ್ಷಣಾ ಸಚಿವರಾಗಿ ಪ್ರಾಮಾಣಿಕವಾಗಿ ಜವಾಬ್ದಾರಿಯನ್ನು ನಿಭಾಯಿಸಿದ್ದ ಜಾರ್ಜ್ ಫರ್ನಾಂಡೀಸ್ ಅವರ ಹೆಸರನ್ನು ಕದ್ರಿ ಪಾರ್ಕ್‌ನಿಂದ ಲಾಲ್ ಬಾಗ್‌ವರೆಗಿನ ಮುಖ್ಯ ರಸ್ತೆಗೆ ಇಡಬೇಕೆಂದು ಜಾರ್ಜ್ ಫರ್ನಾಂಡೀಸ್ ಅಭಿಮಾನಿ ಬಳಗ ಒತ್ತಾಯಿಸಿದೆ.

9 ಬಾರಿ ಲೋಕಸಭಾ ಚುನಾವಣೆಯನ್ನು ಗೆದ್ದಿರುವುದು ಜಾರ್ಜ್ ಫರ್ನಾಂಡೀಸ್ ಅವರ ಜನಪ್ರಿಯತೆಯನ್ನು ತೋರಿಸಿಕೊಡುತ್ತದೆ. ಸರ್ವಜನಾನುರಾಗಿಯಾಗಿ ಅಜಾತಶತ್ರುವೆಂದು ಪ್ರಸಿದ್ಧರಾದವರು. ರಾಷ್ಟ್ರನಾಯಕರಾಗಿ ಅವರು ಮಾಡಿರುವ ಸಾಧನೆಯನ್ನು ಪರಿಗಣಿಸಿ ಕೇಂದ್ರ ಸರಕಾರ ಮರಣೋತ್ತರವಾಗಿ ಜಾರ್ಜ್ ಫರ್ನಾಂಡೀಸ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಆದರೆ ಇಂತಹ ಮಹಾನ್ ನಾಯಕರ ತಾಯ್ನಾಡಿನಲ್ಲಿಯೇ ಅವರಿಗೆ ಸರಿಯಾದ ಗೌರವ ದೊರಕಿಲ್ಲ‌. ಆದ್ದರಿಂದ ಮಂಗಳೂರಿನ ಬಿಜೈನಲ್ಲಿ ಹುಟ್ಟಿರುವ ಅವರು ತಮ್ಮ ಕಾರ್ಯವ್ಯಾಪ್ತಿವನ್ನು ಇಡೀ ಭಾರತಾದ್ಯಂತ ವಿಸ್ತರಿಸಿದ್ದರು. ಆದರೆ ಅವರ ಹೆಸರು ಉಳಿಯುವಂತಹ ಯಾವುದೇ ಕಾರ್ಯ ಆಗಿಲ್ಲ. ಆದ್ದರಿಂದ ಮಂಗಳೂರಿನ ಕದ್ರಿ ಪಾರ್ಕ್ ನಿಂದ ಲಾಲ್ ಬಾಗ್‌ವರೆಗಿನ ಮುಖ್ಯ ರಸ್ತೆಗೆ ಇಡಬೇಕೆಂದು ಒತ್ತಾಯಿಸಿದ್ದಾರೆ.

Edited By :
Kshetra Samachara

Kshetra Samachara

06/05/2022 03:31 pm

Cinque Terre

6.51 K

Cinque Terre

1

ಸಂಬಂಧಿತ ಸುದ್ದಿ