ಉಡುಪಿ: ರಾಜ್ಯ ಸರ್ಕಾರವು ಪಿಎಸ್ಐ ನೇಮಕಾತಿ ಹಗರಣವನ್ನು ಸಿಐಡಿ ತನಿಖೆಗೆ ವಹಿಸಿದೆ.ಆದರೆ ಇದರಿಂದ ಸೂಕ್ತ ತನಿಖೆ ನಡೆಯುವುದು ಅಸಾಧ್ಯ. ಸರಕಾರದ ಸುಪರ್ದಿಯಲ್ಲಿರುವ ಸಿಐಡಿಯಿಂದ ತನಿಖೆ ನಡೆಸುವ ಬದಲು ನಿವೃತ್ತ ನ್ಯಾಯಮೂರ್ತಿಗಳಿಂದ ಈ ಹಗರಣವನ್ನು ತನಿಖೆಗೊಳಪಡಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು ಅವರು ಆಗ್ರಹಿಸಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಅವರು ರಾಜ್ಯ ಸರ್ಕಾರ ಪಿಎಸ್ಐ ಹಗರಣ ಆದ ತಕ್ಷಣ ಇಡೀ ನೇಮಕಾತಿಯನ್ನು ರದ್ದುಮಾಡಿ ಮತ್ತೆ ಪರೀಕ್ಷೆ ನಡೆಸಲು ಮುಂದಾಗಿದೆ. ಇದು ಸೂಕ್ತವಲ್ಲ.ಇದರಿಂದ ರಾಜ್ಯ ಸರಕಾರ ಹಗರಣ ಆಗಿರುವುದನ್ನು ಒಪ್ಪಿಕೊಂಡಂತಾಗಿದೆ. ಜೊತೆಗೆ ಸಿಐಡಿ ಹಗರಣವನ್ನು ಮುಚ್ಚಿಹಾಕುವ ಪ್ರಯತ್ನಕ್ಕೆ ಸರಕಾರ ಕೈಹಾಕಿದೆ ಎಂದು ಅಶೋಕ್ ಕೊಡವೂರು ಆರೋಪಿಸಿದ್ದಾರೆ.
Kshetra Samachara
04/05/2022 02:53 pm