ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮೇ.9ರಂದು ದೇವಸ್ಥಾನದಲ್ಲಿ ಓಂಕಾರ, ಸುಪ್ರಭಾತ : ಮುತಾಲಿಕ್ ಸವಾಲು

ಮಂಗಳೂರು: ಶ್ರೀರಾಮ ಸೇನೆಯು ರಾಜ್ಯ ಸರಕಾರ, ಮುಸ್ಲಿಂ ಸಮಾಜಕ್ಕೆ ಚಾಲೆಂಜ್ ಎಂಬಂತೆ ಮೇ 9ರಂದು 1ಸಾವಿರ ದೇವಸ್ಥಾನ, ಮಠಗಳಲ್ಲಿ ಬೆಳಗ್ಗಿನ ಜಾವ 5 ಗಂಟೆಗೆ ಓಂಕಾರ, ಸುಪ್ರಭಾತ ಹಾಕುವ ನಿರ್ಣಯ ಮಾಡಿದೆ.

ಸರಕಾರವೇನಾದರೂ ಇದನ್ನು ತಡೆಯಲು ಬಂದರೆ ಸಂಘರ್ಷ ಖಂಡಿತಾ. ಮುಸ್ಲಿಂ ಸಮಾಜವೂ ಇದು ತಾಲಿಬಾನ್, ಅಫ್ಘಾನಿಸ್ತಾನ ಅಲ್ಲ ಭಾರತದ ಸಂವಿಧಾನದ ಅಡಿಯಲ್ಲಿ ನಡೆಯುತ್ತಿದೆ ಎಂಬುದನ್ನು ನೆನಪಿನಲ್ಲಿಡಲಿ ಎಂದು ಶ್ರೀರಾಮಸೇನೆಯ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಸವಾಲೆಸೆದರು.

ಅಜಾನ್ ಮೈಕ್ ಅನ್ನು ಸ್ಥಗಿತಗೊಳಿಸಲು ಕಳೆದ 15 ವರ್ಷಗಳಿಂದ ಪ್ರಯತ್ನ ನಡೆಯುತ್ತಿದೆ. ಆದರೆ ಪ್ರಯೋಜನವಾಗಿಲ್ಲ. ನಾವು ಅಜಾನ್ ವಿರುದ್ಧ ಸಮರ ಸಾರುತ್ತಿಲ್ಲ ಮೈಕ್ ನ ಶಬ್ದ ಹಾಗೂ ಸುಪ್ರೀಂ ಕೋರ್ಟ್ ಆಜ್ಞೆಯ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಇಂದಿನವರೆಗೂ ಸುಪ್ರೀಂ ಕೋರ್ಟ್ ಆಜ್ಞೆಯನ್ನು ಮಸೀದಿಯ ಮೇಲಿರುವ ಮೈಕ್ ವಿಚಾರದಲ್ಲಿ ಪಾಲನೆ ಆಗುತ್ತಿಲ್ಲ. ಆದ್ದರಿಂದ ಬೆಳಗ್ಗಿನ 5ಗಂಟೆಯ ಅಜಾನ್ ಮೈಕನ್ನು ನಿಲ್ಲಿಸಬೇಕು. ಮೈಕ್ ಶಬ್ದ ಎಷ್ಟು ಇರಬೇಕೆಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ನಿಶ್ಶಬ್ಧ ವಲಯದ ಪ್ರದೇಶದಲ್ಲೂ ಅಜಾನ್ ಮೈಕ್ ಹಾಕಬಾರದೆಂದು ಹೇಳಲಾಗಿದೆ. ಇಲ್ಲೆಲ್ಲಾ ಸುಪ್ರೀಂ ಕೋರ್ಟ್ ಆಜ್ಞೆ ಸ್ಪಷ್ಟವಾಗಿ ಉಲ್ಲಂಘನೆಯಾಗುತ್ತಿದೆ. ಮುಸ್ಲಿಂ ಸಮಾಜ ಹಠದಿಂದ ಸೊಕ್ಕಿನಿಂದ ವರ್ತಿಸುತ್ತಿದೆ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.

ಇನ್ನೊಂದೆಡೆ ಆಡಳಿತದಲ್ಲಿರುವ ಸರಕಾರ ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿಗೆ ತರುತ್ತಿಲ್ಲ. ಆದ್ದರಿಂದ ಆಜಾನ್ ಮೈಕ್ ಮಾತ್ರವಲ್ಲ ಸರಕಾರದ ವಿರುದ್ಧವೂ ನಮ್ಮ ಹೋರಾಟವಿದೆ. ಯುಪಿಯ ಯೋಗಿ ಸರಕಾರದ ಮಾದರಿಯಲ್ಲಿ ರಾಜ್ಯ ಸರಕಾರ ಮಸೀದಿಯ ಮೈಕ್ ಅನ್ನು ಕೆಳಗಿಳಿಸುವ ಧೈರ್ಯ ತೋರಿಸಲಿ. ಬರೀ ನೋಟಿಸ್ ನೀಡಿದ್ದೇವೆ ಎಂಬ ನಾಟಕ ಮಾಡೋದು ಬೇಡ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.

Edited By : Shivu K
PublicNext

PublicNext

02/05/2022 09:12 am

Cinque Terre

32.2 K

Cinque Terre

40

ಸಂಬಂಧಿತ ಸುದ್ದಿ