ಮಂಗಳೂರು: ಝೊಮ್ಯಾಟೊ ಗರ್ಲ್ ಎಂದು ಪ್ರಖ್ಯಾತರಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪಕ್ಷದ ಮಹಿಳಾ ನಾಯಕಿ ಮೇಘನಾ ದಾಸ್ ಇಂದು ವಿಧಿವಶರಾಗಿದ್ದಾರೆ.
ನಗರದ ಮಠದ ಕಣಿ ನಿವಾಸಿ ಮೇಘನಾದಾಸ್ (37) ಕೆಲವು ಸಮಯಗಳಿಂದ ಅಸೌಖ್ಯದಿಂದ ಬಳಲುತ್ತಿದ್ದರು. ಕಳೆದ ಎರಡು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಮೃತಪಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿದ್ದ ಮೇಘನಾದಾಸ್ ಅವರು ಕಳೆದ ಬಾರಿ ಮಹಾನಗರ ಪಾಲಿಕೆಯ 28ನೇ ವಾರ್ಡ್‌ನಲ್ಲಿ ಚುನಾವಣೆಗೆ ನಿಂತಿದ್ದರು. ಬೆಂಗಳೂರಿನ ಎಂಎನ್‌ಸಿ ಕಂಪನಿ, ದುಬೈಯಲ್ಲೂ ಕಂಪನಿಯಲ್ಲಿ ಹಲವು ವರ್ಷಗಳ ಉದ್ಯೋಗಿಯಾಗಿದ್ದ ಅವರು ಆ ಬಳಿಕ ಮಂಗಳೂರಿನಲ್ಲಿ ಝೊಮ್ಯಾಟೊ ಫುಡ್ ಡೆಲಿವರಿ ಗರ್ಲ್ ಆಗಿ ವೃತ್ತಿ ನಿರ್ವಹಿಸುತ್ತಿದ್ದರು. ಸುಮಾರು 2ವರ್ಷಗಳಿಂದ ಅನಾರೋಗ್ಯಕ್ಕೀಡಾಗಿದ್ದ ಅವರು, ಇಂದು ನಿಧನರಾಗಿದ್ದಾರೆ. ಮೃತರು ಪತಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
Kshetra Samachara
29/04/2022 10:38 pm