ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳ್ಕುಂಜೆ : "ಸರಕಾರದ ಕೃಷಿಭೂಮಿ ಸ್ವಾಧೀನದ ವಿರುದ್ಧ ಜನರ ತೀರ್ಮಾನಕ್ಕೆ ಬದ್ಧ": ಉಮಾನಾಥ್

ಮುಲ್ಕಿ : ಜನರು ತಾವು ಬೆಳೆದ ಬೆಳೆ ಮತ್ತು ಭೂಮಿಯ ಮೇಲಿನ ಪ್ರೀತಿ ಬಗ್ಗೆ ತಿಳಿದಿದ್ದೇನೆ, ಜನರ ತೀರ್ಮಾನಕ್ಕೆ ನಾನು ಬದ್ದನಾಗಿದ್ದೇನೆ ಎಂದು ಮುಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಸರಕಾರದ ಮೂಲಕ ಉಳೆಪಾಡಿ, ಕೊಲ್ಲೂರು, ಬಳ್ಕುಂಜೆಯಲ್ಲಿನ ಭೂಸ್ವಾದೀನದ ಬಗ್ಗೆ ಬಳ್ಕುಂಜೆ ಚರ್ಚ್ ಹಾಲ್ ನಲ್ಲಿ ನಡೆದ ಜನಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಸರಕಾರ ಭೂಸ್ವಾದೀನಕ್ಕೆ ನಿರ್ಧರಿಸಿದೆ, ನಾನು ಸರಕಾರದ ಒಂದು ಭಾಗವಾಗಿದ್ದೇನೆ ಆದರೆ ಜನರ ಜೊತೆ ನಾನಿದ್ದೇನೆ, ಅಗತ್ಯವಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತುಕತೆ ನಡೆಸಬಹುದಾಗಿದೆ ಇದಕ್ಕೆ ವ್ಯವಸ್ಥೆ ಮಾಡಲಿದ್ದೇನೆ, ಮುಂದಿನ ತಿಂಗಳು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮಂಗಳೂರಿಗೆ ಆಗಮಿಸಲಿದ್ದು, ಗ್ರಾಮಸ್ಥರು ಮನವಿ ಸಲ್ಲಿಸುದಾದರೆ ಅದಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ವಕೀಲ ಶಶಿಧರ್ ಅಡ್ಕತ್ತಾಯ ಕಾನೂನು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಬಳ್ಕುಂಜೆ ಗ್ರಾ ಪಂ ಅಧ್ಯಕ್ಷೆ ಮಮತಾ ಡಿ ಪೂಂಜ, ಐಕಳ ಗ್ರಾಪಂ ಉಪಾಧ್ಯಕ್ಷ ರಾಜೇಶ್ ಶೆಟ್ಟಿ, ಮುಂಬೈ ಉದ್ಯಮಿಗಳಾದ ಕರ್ನಿರೆ ವಿಶ್ವನಾಥ ಶೆಟ್ಟಿ, ವಿರಾರ್ ಶಂಕರ ಶೆಟ್ಟಿ, ಡೇನೀಸ್ ಡಿಸೋಜ, ಪ್ರಾನ್ಸಿಸ್ ಮೆನೇಜಸ್, ಮತ್ತಿತರರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

25/04/2022 07:05 pm

Cinque Terre

9.76 K

Cinque Terre

0

ಸಂಬಂಧಿತ ಸುದ್ದಿ