ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಹಿಂದೂಗಳ ಹಬ್ಬದಂದು ಹಿಂದೂ ಅಂಗಡಿಯಲ್ಲೇ ಖರೀದಿ ಮಾಡಿದ್ರೆ ಸಂಸ್ಕೃತಿ ಉಳಿಯುತ್ತೆ.: ಮುತಾಲಿಕ್

ಕುಂದಾಪುರ: ಅಕ್ಷಯ ತೃತೀಯ ಗೋಲ್ಡ್ ಬ್ಯಾನ್ ವಿಚಾರವಾಗಿ ಕುಂದಾಪುರದಲ್ಲಿ ಮಾತನಾಡಿರುವ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಈ ತರಹ ಸಂಘರ್ಷ ನಿರಂತರ ಮುಂದುವರೆಯುತ್ತದೆ. ಸಮಾಜಕ್ಕೆ , ಜನರಿಗೆ , ದೇಶಕ್ಕೆ ಯಾವುದು ಹಿತ, ಯಾವುದು ಮಾರಕ ಎನ್ನುವುದು ಗೊತ್ತಾಗಿದೆ. ಹಿಂದೂ ಸಂಘಟನೆಗಳಿಂದ ಸಮಾಜ ಜಾಗೃತಿ ಯಾಗಿದೆ. ಸಮಾಜಕ್ಕೊಂದು ಕಲ್ಪನೆ, ದೃಷ್ಟಿಕೋನ ಸಿಕ್ಕಿದೆ. ಅಕ್ಷಯ ತೃತೀಯದಂದು ಹಿಂದೂಗಳ ಅಂಗಡಿಯಲ್ಲೇ ಖರೀದಿ ಮಾಡಿ ಎಂದು ಪುನರುಚ್ಚರಿಸಿದ್ದಾರೆ.

ಅಕ್ಷಯ ತೃತೀಯ ಹಿಂದುಗಳ ಹಬ್ಬ. ಹಿಂದೂಗಳ ಹಬ್ಬದಂದು ಹಿಂದೂಗಳ ಅಂಗಡಿಯಲ್ಲೇ ಖರೀದಿ ಮಾಡಿದರೆ ಸಂಸ್ಕೃತಿ ಉಳಿಯುತ್ತೆ. ಹಿಂದೂಸ್ತಾನದ ಸುರಕ್ಷತೆಗೆ ಇದು ಅಗತ್ಯ. ಜನರು ಕೂಡ ಇದಕ್ಕೆ ಸ್ಪಂದಿಸುತ್ತಿದ್ದಾರೆ. ಹಲಾಲ್ ಬಗ್ಗೆ ಆಗಿರುವ ಜಾಗೃತಿಯನ್ನು ನಾವು ನೋಡಿದ್ದೇವೆ. ಮುಂದಿನ ದಿನ ಹಲಾಲ್ ಕಟ್ ಮಾಂಸವನ್ನು ಹಿಂದೂಗಳು ಖರೀದಿ ಮಾಡುವುದಿಲ್ಲ. ಇದೇ ಮಾದರಿಯ ಹೋರಾಟ ಈ ವಿಚಾರದಲ್ಲೂ ನಡೆಯಲಿದೆ. ಕೇರಳ ಮೂಲದ ಜ್ಯುವೆಲ್ಲರಿ ಕಂಪೆನಿಗಳು ಹಿಂಸೆಗೆ ಹಣಕಾಸು ನೆರವು ನೀಡುತ್ತಿವೆ ಎಂದು ಹೇಳಿದ್ದಾರೆ.

Edited By : Manjunath H D
PublicNext

PublicNext

25/04/2022 12:41 pm

Cinque Terre

22.43 K

Cinque Terre

9

ಸಂಬಂಧಿತ ಸುದ್ದಿ