ಉಡುಪಿ: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಪ್ರಿಯಾಂಕ ಖರ್ಗೆ ಅವರನ್ನು ತನಿಖೆಗೆ ಒಳಪಡಿಸುವಂತೆ ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಒತ್ತಾಯಿಸಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಸಚಿವರು, ಪ್ರಿಯಾಂಕ ಖರ್ಗೆ ಅವರ ನಿಕಟವರ್ತಿಗಳು ಈಗಾಗಲೇ ಬಂಧಿತರಾಗಿದ್ದಾರೆ. ತಮ್ಮ ಮೇಲೆ ಬಂದಿರುವ ಆರೋಪಗಳನ್ನು ಅಲ್ಲಗಳೆಯಲು ಪ್ರಿಯಾಂಕ ಖರ್ಗೆ ಸಕ್ರಿಯರಾಗುತ್ತಿದ್ದಾರೆ. ಪ್ರಿಯಾಂಕ ಖರ್ಗೆ ಅವರನ್ನು ತಕ್ಷಣ ತನಿಖೆಗೆ ಒಳಪಡಿಸಬೇಕು ಎಂದು ಹೇಳಿದ್ದಾರೆ.
ಈಗಾಗಲೇ ಬ್ಲಾಕ್ ಕಾಂಗ್ರೆಸ್‌ಗೆ ಅಧ್ಯಕ್ಷರಾಗಿ ಕೆಲಸ ಮಾಡಿದವರು ಬಂಧನಕ್ಕೊಳಗಾಗಿದ್ದಾರೆ. ಇವರಿಗೆ ನಿಕಟವರ್ತಿಯಾಗಿ ಪ್ರಿಯಾಂಕ ಖರ್ಗೆ ಸಲಹೆ ನೀಡಿದ್ದಾರೆ. ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ಆರೋಪಗಳು ಕೇಳಿ ಬಂದಿವೆ. ಅಕ್ರಮ ನಡೆಯುತ್ತಿರುವಾಗಲೇ ಪ್ರಿಯಾಂಕ ಖರ್ಗೆ ಕೈಗೆ ಆಡಿಯೋ ಸಿಕ್ಕಿದೆ. ಇವರ ಕೈವಾಡ ಇಲ್ಲದೆ ಆಡಿಯೋ ಇವರ ಕೈಗೆ ಸಿಗಲು ಸಾಧ್ಯವಿಲ್ಲ.ಪ್ರಿಯಾಂಕ ಖರ್ಗೆ ಯನ್ನು ಬಿಟ್ಟು ತನಿಖೆ ಪೂರ್ಣಗೊಳ್ಳಲು ಸಾಧ್ಯವಿಲ್ಲ.ಗಮನ ಬೇರೆಡೆಗೆ ಸೆಳೆಯಲು ಖರ್ಗೆ ಪ್ರತಿನಿತ್ಯ ಪ್ರೆಸ್ ಕಾನ್ಫರೆನ್ಸ್ ಮಾಡುತ್ತಿದ್ದಾರೆ.ಯಾರನ್ನೂ ಕೂಡ ಈ ಪ್ರಕರಣದಲ್ಲಿ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸುನಿಲ್ ಕುಮಾರ್ ಹೇಳಿದ್ದಾರೆ.
PublicNext
24/04/2022 09:16 pm