ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು ದೇವಸ್ಥಾನಕ್ಕೆ ರಾಜ್ಯಪಾಲ ಗೆಹ್ಲೋಟ್ ಭೇಟಿ

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ರಾಜ್ಯ ರಾಜಪಾಲ ಥಾವರ್ ಚಂದ್ ಗೆಹ್ಲೋಟ್ ಶನಿವಾರ ಸಂಜೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು ಹಾಗೂ ದೇವಿ ಮೂರು ಸೀರೆಗಳನ್ನು ಸಮರ್ಪಿಸಿದರು. ಬಳಿಕ ನಂದನಿ ನದಿ, ದೇವಸ್ಥಾನದ ಗೋಶಾಲೆಗೆ ಭೇಟಿ ನೀಡಿ ಕಪಿಲೆ ದನಕ್ಕೆ ಹಣ್ಣು, ಹಿಂಡಿ ಸಮರ್ಪಿಸಿದರು.

ದೇವಸ್ಥಾನದ ಅಡಳಿತ ಸಮಿತಿ ಅಧ್ಯಕ್ಷ ಹಾಗೂ ಅನುವಂಶಿಕ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು, ಅನುವಂಶಿಕ ಮುಕ್ತೇಸರ ಹಾಗೂ ಅನುವಂಶಿಕ ಅರ್ಚಕ ವಾಸುದೇವ ಆಸ್ರಣ್ಣ ಸ್ವಾಗತಿಸಿದರು. ಅಧಿಕಾರಿವರ್ಗದವರು ಪೊಲೀಸ್ ವರಿಷ್ಠಾಧಿಕಾರಿಗಳು ಉಪಸ್ಥಿತರಿದ್ದರು. ರಾಜ್ಯಪಾಲರ ಭೇಟಿ ನಿಮಿತ್ತ ಕಟೀಲಿನಲ್ಲಿ ವ್ಯಾಪಕ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Edited By : Nagesh Gaonkar
PublicNext

PublicNext

23/04/2022 09:48 pm

Cinque Terre

55.29 K

Cinque Terre

0

ಸಂಬಂಧಿತ ಸುದ್ದಿ