ಮಂಗಳೂರು: ಜೆಡಿಎಸ್ ಜಲಧಾರೆ ಕಾರ್ಯಕ್ರಮವು ನಾಳೆ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಬಪ್ಪನಾಡು ಕ್ಷೇತ್ರದಿಂದ ಬೆಳಗ್ಗೆ 9 ಗಂಟೆಗೆ ಪ್ರಾರಂಭ ಆಗಲಿದೆ ಎಂದು ಜೆಡಿಎಸ್ ಯುವ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಮಾಹಿತಿ ನೀಡಿದ್ದಾರೆ.
ಮಂಗಳೂರಲ್ಲಿ ಮಾತನಾಡಿದ ಅವರು, ಅಲ್ಲಿ ಪೂಜೆ ಮುಗಿಸಿ ಶಾಂಭವಿ ನದಿಯಿಂದ ನೀರನ್ನು ಸಂಗ್ರಹಿಸಲಿದ್ದೇವೆ. ಈ ಮೂಲಕ ಜಲಧಾರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ನಗರಕ್ಕೆ ಶೋಭಾಯಾತ್ರೆ ಮೂಲಕ ಬಂದು ನಗರದ ಕದ್ರಿ ದೇಗುಲದಲ್ಲಿ ಪೂಜೆ ಸಲ್ಲಿಸಲಿದ್ದೇವೆ.
ತದನಂತರ ಸಂಜೆ ಕಣ್ಣೂರಲ್ಲಿ ಜೆಡಿಎಸ್ ಸಭೆ ನಡೆಯಲಿದೆ. ಇಲ್ಲಿಗೂ ರಥ ಹೋಗಲಿದೆ. ಎಪ್ರಿಲ್ 20 ರಂದು ಧರ್ಮಸ್ಥಳ, 21 ರಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ರಥ ಹೋಗಲಿದೆ. ಜೊತೆಗೆ ವಿಶೇಷ ಪೂಜೆ ನಡೆಯಲಿದೆ. ಅಲ್ಲಿಂ ನೇರವಾಗಿ ರಥ ಬೆಂಗಳೂರು ತಲುಪಲಿದೆ ಅಂದ್ರು.
Kshetra Samachara
18/04/2022 02:25 pm