ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರಾಷ್ಟ್ರಕವಿ ಗೋವಿಂದ ಪೈ ಹೆಸರಿಗೆ ಕೇಸರಿ ಥಳಕು!

ಮಂಗಳೂರು: ನಗರದ ನವಭಾರತ ಸರ್ಕಲ್ ಈಗ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವೃತ್ತವಾಗಿ ಬದಲಾಗಿದೆ. ಸ್ಮಾರ್ಟ್ ಸಿಟಿ ವತಿಯಿಂದ ಈ ವೃತ್ತದ ಕಾಮಗಾರಿ ನಡೆದಿದ್ದು, ಇತ್ತೀಚೆಗಷ್ಟೇ ಲೋಕಾರ್ಪಣೆಗೊಂಡಿತ್ತು. ಆದರೆ ಇದೀಗ ಈ ವೃತ್ತದಲ್ಲಿ ಕೇಸರಿ ಧ್ವಜ ರಾರಾಜಿಸುತ್ತಿದೆ.

ರಾಷ್ಟ್ರಕವಿ ಮಂಜೇಶ್ವರ ಎಬಿವಿಪಿ ಸಂಘಟನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಂಜೇಶ್ವರ ಗೋವಿಂದ ಪೈ ವೃತ್ತಕ್ಕೆ ಕೇಸರಿ ಧ್ವಜ, ಭಗವಾಧ್ವಜಗಳನ್ನು ಕಟ್ಟಲಾಗಿತ್ತು. ಆದರೆ ಕಾರ್ಯಕ್ರಮ ಮುಗಿದರೂ ಕೇಸರಿ ಧ್ವಜವನ್ನು ತೆಗೆಯಲಾಗಿಲ್ಲ. ಸಾರ್ವಜನಿಕ ಸ್ಥಳದಲ್ಲಿನ ವೃತ್ತವನ್ನು ಕೇಸರಿ ಧ್ವಜಗಳನ್ನು ಹಾಕಿ ಅದರ ಅಂದಗೆಡಿಸಿದ್ದರೂ, ಮಂಗಳೂರು ಮಹಾನಗರ ಪಾಲಿಕೆ ಮೌನವಹಿಸಿರುವುದು ಆಶ್ಚರ್ಯ ತಂದಿದೆ. ಈ ಬಗ್ಗೆ ತಕ್ಷಣ ಜಿಲ್ಲಾಡಳಿತ ಎಚ್ಚೆತ್ತು ಕೇಸರಿ ಧ್ವಜಗಳನ್ನು ತೆಗೆಯಲು ಮನಸ್ಸು ಮಾಡಬೇಕಾಗಿದೆ.

Edited By : Manjunath H D
Kshetra Samachara

Kshetra Samachara

16/04/2022 05:48 pm

Cinque Terre

7.01 K

Cinque Terre

1

ಸಂಬಂಧಿತ ಸುದ್ದಿ