ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಜಾತಿ ನೋವು ಬಿಚ್ಚಿಟ್ಟ ಜಿ.ಪರಮೇಶ್ವರ್

ಉಡುಪಿ: ಬಾಲ್ಯದಿಂದಲೂ ತಾರತಮ್ಯ ಅನುಭವಿಸಿಕೊಂಡು ಬಂದಿದ್ದೇವೆ. ಅದನ್ನು ನನ್ನಂಥವರು ಹೇಳದೆ ಮತ್ಯಾರು ಹೇಳಬೇಕು ಎಂದು ಮಾಜಿ ಡಿಸಿಎಂ ಜಿ.ಪರಮೇಶ್ವರ್ ಪ್ರಶ್ನಿಸಿದ್ದಾರೆ.

ಜಾತಿಯ ಕಾರಣಕ್ಕೆ ತಾವು ಅವಮಾನ ಎದುರಿಸಿದ ವಿಚಾರವಾಗಿ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, 'ಇದನ್ನು ಕಾನೂನಿಂದ ಸರಿಪಡಿಸಲು ಸಾಧ್ಯವಿಲ್ಲ. ಜನರ ಮನಸ್ಸು ಬದಲಾವಣೆಯಾಗಬೇಕು. ಹಿಂದೆಲ್ಲಾ ನಾನು ಶಾಸಕನಾಗಿದ್ದಾಗ, ಸಚಿವನಾಗಿದ್ದಾಗ ನಡೆದ ಘಟನೆಗಳ ಕಾರಣಕ್ಕೆ ಹೇಳಿದ್ದೆ. 21ನೇ ಶತಮಾನದಲ್ಲಾದರೂ ಬದಲಾವಣೆಯಾಗಲಿ ಅನ್ನುವ ಉದ್ದೇಶದಿಂದ ಹೇಳಿದ್ದೇನೆ ಎಂದು ತಿಳಿಸಿದ್ದಾರೆ.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಜಿ. ಪರಮೇಶ್ವರ್ ಅವರು, ಈ ಬಗ್ಗೆ ಪ್ರಮೋದ್ ಮಧುರಾಜ್ ಜೊತೆ ಮಾತನಾಡಿ ಬಂದಿದ್ದೇನೆ. ಅವರ ಕೆಲವು ಬೇಡಿಕೆಗಳು ಅನಿಸಿಕೆಗಳು ಇವೆ. ಅವನ್ನೆಲ್ಲ ಸರಿಪಡಿಸಿಕೊಳ್ಳುತ್ತೇವೆ. ಅವರು

ಬಿಜೆಪಿ ಸೇರ್ಪಡೆ ಆಗುತ್ತಾರೆ ಅನಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

Edited By : Vijay Kumar
Kshetra Samachara

Kshetra Samachara

16/04/2022 05:46 pm

Cinque Terre

7.56 K

Cinque Terre

0

ಸಂಬಂಧಿತ ಸುದ್ದಿ