ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಿಲ್ಲಾಡಳಿತ ನಿರ್ಬಂಧ ಹಿನ್ನೆಲೆ: ಒಂದು ದಿನ ಮೊದಲೇ ಗಂಗೊಳ್ಳಿಯಲ್ಲಿ ಪ್ರತ್ಯಕ್ಷವಾದ ಮುತಾಲಿಕ್!

ಕುಂದಾಪುರ: ಕಾನೂನು ಸುವ್ಯವಸ್ಥೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತದ ನಿರ್ಬಂಧದ ನಡುವೆಯೂ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಒಂದು ದಿನ ಮೊದಲೇ ಗಂಗೊಳ್ಳಿಗೆ ಆಗಮಿಸಿದ್ದಾರೆ!

ನಿನ್ನೆ ರಾತ್ರಿ ದಿಢೀರ್ ಆಗಮಿಸಿ ಕಾರ್ಯಕರ್ತರನ್ನು ಭೇಟಿಯಾದರು.ಗಂಗೊಳ್ಳಿಯ ವೀರೇಶ್ವರ ದೇವಸ್ಥಾನದಲ್ಲಿ ಇವತ್ತು ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಸಂಜೆ ನಡೆಯುವ ಧಾರ್ಮಿಕ ನಿಗದಿಯಾಗಿತ್ತು.ಆದರೆ ಸಭೆಯಲ್ಲಿ - ಪ್ರಮೋದ್ ಮುತಾಲಿಕ್ ಅವರು ಭಾಗಿಯಾಗದಂತೆ ಉಡುಪಿ ಜಿಲ್ಲಾಡಳಿತ ಎರಡು ದಿನ ಹಿಂದೆಯೇ ನಿರ್ಬಂಧ ಹೇರಿ ಆದೇಶಿಸಿತ್ತು.

ಕಾರ್ಯಕ್ರಮದ ಮುನ್ನಾದಿನವಾದ ಗುರುವಾರ ರಾತ್ರಿ ಗಂಗೊಳ್ಳಿಗೆ ಆಗಮಿಸಿದ ಮುತಾಲಿಕ್ ಅವರು ದೇವಸ್ಥಾನಕ್ಕೆ ಭೇಟಿ ನೀಡಿ,

ಕಾರ್ಯಕ್ರಮದ ಕುರಿತಂತೆ ಹಿಂದೂ ಜಾಗರಣ ವೇದಿಕೆ ಪ್ರಮುಖರ ಜತೆ ಚರ್ಚಿಸಿದರು.

ಈ ವೇಳೆ ಮಾತಾಡಿದ ಮುತಾಲಿಕ್ ಅವರು, ಹಿಂದುತ್ವಕ್ಕಾಗಿಯೇ ಹೋರಾಟ ಮಾಡುತ್ತಿರುವ ನನಗೆ ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೇರಿದ ಬಿಜೆಪಿ ಸರಕಾರವೇ ನಿರ್ಬಂಧ ಹೇರುತ್ತಿರುವುದು ಬೇಸರ ತರಿಸಿದೆ ಎಂದು ಹೇಳಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

15/04/2022 08:05 am

Cinque Terre

7.16 K

Cinque Terre

2

ಸಂಬಂಧಿತ ಸುದ್ದಿ