ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೃಷ್ಣಾಪುರದಲ್ಲಿ ತಾಳಿ ಭಾಗ್ಯ ಚೆಕ್ ವಿತರಿಸಿ ಸಚಿವ ಸುನಿಲ್ ಕುಮಾರ್

ಸುರತ್ಕಲ್: ಪ್ರಧಾನ ಮಂತ್ರಿಯವರ ನವಭಾರತ ನಿರ್ಮಾಣದ ಕಲ್ಪನೆಯನ್ನು ಕಣ್ಣ ಮುಂದೆ ಇಟ್ಟುಕೊಂಡು ಬಲಿಷ್ಠ ಭಾರತವನ್ನು ಕಟ್ಟಬೇಕು ಎಂದು ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.

ಯುವಕ ಮಂಡಲ (ರಿ) ಕೃಷ್ಣಾಪುರ ಕಾಟಿಪಳ್ಳ ಇದರ ಸುವರ್ಣ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ "ಕೃಷ್ಣಾಪುರ ಹಬ್ಬ" ಸಂಭ್ರಮದಲ್ಲಿ ಬಡ ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಯುವಕ ಮಂಡಲದ ವತಿಯಿಂದ ತಾಳಿ ಭಾಗ್ಯ ಚೆಕ್ಕನ್ನು ವಿತರಿಸಿ ಅವರು ಮಾತನಾಡಿದರು.

ಮುಂದಿನ ಒಂದು ವರ್ಷದಲ್ಲಿ 50 ಸಮಾಜಮುಖಿ ಉದಾತ್ತ ಯೋಜನೆಗಳ ಜೊತೆಗೆ 50 ಬಡ ಕುಟುಂಬದ ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಚೆಕ್ಕನ್ನು ವಿತರಿಸುತ್ತಿರುವ ಕೃಷ್ಣಾಪುರ ಯುವಕ ಮಂಡಲದ ಯೋಜನೆಗಳು ನಿಜಕ್ಕೂ ಮೆಚ್ಚುವಂತಹುದು. ಕಾಲಕಾಲದಲ್ಲಿ ಯೋಜನೆಗಳನ್ನು ರೂಪಿಸಿ ಹೊಣೆಗಾರಿಕೆಯಿಂದ ಸಮಾಜಮುಖಿ ಆಲೋಚನೆಗಳು ವಿಸ್ತರವಾಗಬೇಕು ಎಂದು ಅವರು ಯುವಕರಿಗೆ ಕರೆ ನೀಡಿದರು.

ಸಮಾರಂಭವನ್ನು ದ. ಕ. ಜಿಲ್ಲಾ ಬಿ ಜೆ ಪಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ ಉದ್ಘಾಟಿಸಿದರು.ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ರಾಷ್ಟ್ರಪ್ರಶಸ್ತಿ ಪುರಸ್ಕೃತೆ ಕು. ಬಿಂದಿಯಾ ಶೆಟ್ಟಿ ಸುರತ್ಕಲ್ ಇವರ ಸಾಧನೆಯನ್ನು ಗುರುತಿಸಿ ಜ್ಯೋತಿಷಿ ಕೆ.ಸಿ. ನಾಗೇಂದ್ರ ಭಾರದ್ವಾಜ್ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಶಿರಸಿ ವೈಭವ್ ಒಕ್ಸಿ ಪ್ಲಸ್ ನ ವಿಜಯ್ ಪ್ರಶಾಂತ್ ಭಟ್, ಸೇರಿದಂತೆ ಮುಂತಾದವರಿದ್ದರು.

Edited By : Nirmala Aralikatti
Kshetra Samachara

Kshetra Samachara

09/04/2022 07:52 am

Cinque Terre

9.77 K

Cinque Terre

0

ಸಂಬಂಧಿತ ಸುದ್ದಿ