ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು : ನನ್ನನ್ನು ಯಾಕೆ ಪದಚ್ಯುತಿಗೊಳಿಸಲಾಗಿದೆ ಗೊತ್ತಿಲ್ಲ : ? ರಹೀಂ ಉಚ್ಚಿಲ್

ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನದಿಂದ ರಹೀಂ ಉಚ್ಚಿಲ್ ಅವರನ್ನು ಪದಚ್ಯುತಿಗೊಳಿಸಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನನಗೆ ಗೊತ್ತಿಲ್ಲ, ನಾನು ಕೂಡಾ ಕಾರಣದ ಹುಡುಕಾಟದಲ್ಲಿದ್ದೀನಿ. ಇಂತಹ ಕಾರಣಕ್ಕೆ ನನ್ನನ್ನು ಪದಮುಕ್ತಗೊಳಿಸಿದ್ದಾರೆಂದು ಹೇಳಿಲ್ಲ. ನಾನು ಪಕ್ಷ, ಸರ್ಕಾರಕ್ಕೆ ಕೇಳಿದ್ದೀನಿ, ಕಾರಣ ಏನಂತ ಆದ್ರೆ ಅವರು ಕಾರಣ ಏನಂತ ಹೇಳಿಲ್ಲ. ಪದಮುಕ್ತಗೊಳಿಸಲು ಅವರಿಗೆ ಅವಕಾಶ ಇದೆ. ಏನೇ ಆದ್ರೂ ನನಗೆ ಎರಡೂವರೆ ವರ್ಷಗಳ ಕಾಲ ಆಡಳಿತ ನಡೆಸಲು ಅವಕಾಶ ಕೊಟ್ಟಿದ್ರಿ. ಅದಕ್ಕೆ ಅಭಿನಂದನೆಗಳನ್ನು ಸಲ್ಲಿಸ್ತೀನಿ ಎಂದರು.

ಇನ್ನು ಕೇವಲ ಐದಾರು ತಿಂಗಳು ಇರುವಾಗ ಯಾಕೆ ಪದಮುಕ್ತ ಮಾಡಿದ್ರು ಎನ್ನುವುದು ನನಗೆ ಯಕ್ಷಪ್ರಶ್ನೆಯಾಗಿದೆ. ಆದರೂ ಸರ್ಕಾರದ ನಡೆಗೆ ನಾನು ಗೌರವ ಕೊಡ್ತೀನಿ ಎಂದಿದ್ದಾರೆ.

ಬ್ಯಾರಿ ಭವನ ನಿರ್ಮಾಣದ ಕುರಿತಾದ ವಿವಾದ ಸೌಹಾರ್ದಯುತವಾಗಿ ಬಗೆಹರಿದಿದೆ. ಅದು ಕಾರಣ ಅಲ್ಲ. ಈ ಕುರಿತು ದೂರು ಕೊಟ್ಟ ಮೇರೆಗೆ ಅದು ಈಗ ಆಚರಣೆಗೆ ಬಂದಿದ್ಯಾ ಎಂಬುದು ಗೊತ್ತಿಲ್ಲ ಎಂದಿದ್ದಾರೆ.

Edited By :
Kshetra Samachara

Kshetra Samachara

06/04/2022 06:35 pm

Cinque Terre

13.82 K

Cinque Terre

3

ಸಂಬಂಧಿತ ಸುದ್ದಿ