ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿರುವವರನ್ನು ಮುಸ್ಲಿಂ ಸಮುದಾಯ ಬಹಿಷ್ಕರಿಸಬೇಕು

ಉಡುಪಿ: ಮುಸ್ಲಿಂ ಸಮುದಾಯದಲ್ಲಿ ಬೆರಳೆಣಿಕೆಯಷ್ಟು ಜನ ಕ್ರಿಮಿನಲ್ ಚಟುವಟಿಕೆಗಳಲ್ಲಿ ಮತ್ತು ಭಯೋತ್ಪಾದಕ ಸಂಘಟಬೆಗಳಿಗೆ ಬೆಂಬಲ ನೀಡುವ ಕೆಲಸದಲ್ಲಿ ತೊಡಗಿದ್ದಾರೆ.ಇಂಥವರಿಗೆ ಮುಸ್ಲಿಂ ಸಮುದಾಯ ಬಹಿಷ್ಕಾರ ಹಾಕಬೇಕು ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ದೇಶಪ್ರೇಮಿ ಮುಸಲ್ಮಾನರು ದೊಡ್ಡ ಸಂಖ್ಯೆಯಲ್ಲಿದ್ದಾರೆ.ಅವರು ಇನ್ನು ಮೌನ ವಹಿಸಬಾರದು. ತಮ್ನ ಸಮುದಾಯದ ಕೆಲವೇ ಜನರಿಂದಾಗಿ ಇಡೀ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದೆ.ಹೀಗಾಗಿ ಧರ್ಮಗುರುಗಳು ಅವರಿಗೆ ಬಹಿಷ್ಕಾರ ಹಾಕಬೇಕು ಎಂದು ಹೇಳಿದರು.

ಹಿಜಾಬ್ ವಿವಾದದ ಹಿಂದೆ ಅಂತಾರಾಷ್ಟ್ರೀಯ ಸಂಚು ಇದೆ ಎಂದು ಈ ಮೊದಲೇ ಹೇಳಿದ್ದೆ.ಅದೀಗ ನಿಜವಾಗುತ್ತಿದೆ.ಅದೇ ಕಾರಣಕ್ಕೆ ಎನ್ ಐ ಎ ತನಿಖೆಗೆ ಆಗ್ರಹಿಸಿದ್ದಾಗಿ ಶಾಸಕರು ಹೇಳಿದರು. ಅಲ್ ಖೈದಾದವರು ಹಿಜಾಬ್ ವಿವಾದದ ಕುರಿತು ವೀಡಿಯೋ ಹೇಳಿಕೆ ನೀಡಿದ್ದಾರೆ ಎಂದರೆ ಏನರ್ಥ? ಅವರು ಅವರ ದೇಶದ್ದನ್ನು ನೋಡಿಕೊಂಡರೆ ಸಾಕು, ನಮ್ಮ ದೇಶದ ವಿಷಯ ಅವರಿಗೆ ಬೇಡ.ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಸರು ಕೆಡಿಸುವ ತಂತ್ರ ಇದಾಗಿದೆ ಎಂದು ರಘುಪತಿ ಭಟ್ ಹೇಳಿದರು.

Edited By : Nagesh Gaonkar
PublicNext

PublicNext

06/04/2022 01:30 pm

Cinque Terre

31.95 K

Cinque Terre

5

ಸಂಬಂಧಿತ ಸುದ್ದಿ