ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು : ರಾಜ್ಯದಲ್ಲಿ ಹಾಗೂ ಉಡುಪಿ ಜಿಲ್ಲೆಯಲ್ಲಿ ಮೆಡಿಕಲ್ ಮಾಫಿಯಾಗೆ ಕಡಿವಾಣ ಹಾಕುವಂತೆ:ಡಿಸಿಗೆ ದೂರು

ಬೈಂದೂರು :ರಾಜ್ಯದಲ್ಲಿ ಹಾಗೂ ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲೂ ಆಯುರ್ವೇದಿಕ್ ಡಾಕ್ಟರ್ ಗಳು ರಾಜಾರೋಷವಾಗಿ ಅಲೋಪಥಿ ಮೆಡಿಸಿನ್ ಕೊಟ್ಟು ಬಡಜನರಿಂದ ಸಾವಿರಾರು ರೂಪಾಯಿ ಲೂಟಿ ಮಾಡುತ್ತಿರುವ ಬಗ್ಗೆ ಸಂಬಂಧಪಟ್ಟ ಆರೋಗ್ಯ ಇಲಾಖೆ ಹಾಗೂ ಸರ್ಕಾರಕ್ಕೆ ಶಾಸಕ ಸಂಸದರಿಗೆ ಗೊತ್ತಿದ್ದೇ ನಡೆಯುವಂತಹದ್ದು.

ಈ ಬಗ್ಗೆ ಕೆಲವು ತಿಂಗಳ ಹಿಂದೆ ಉಡುಪಿ ಜಿಲ್ಲೆಯ ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಅನೇಕ ಪತ್ರಕರ್ತರು ಸಾರ್ವಜನಿಕ ದೂರಿನ ಮೇರೆಗೆ ಕೆಲವು ಕ್ಲಿನಿಕ್ ಗೆ ಗೌಪ್ಯವಾಗಿ ತೆರಳಿ ಸ್ಟಿಂಗ್ ಆಪರೇಷನ್ ನಡೆಸಿ ಅಲ್ಲಿ ನಡೆಯುವ ಅಕ್ರಮ ಮೆಡಿಸಿನ್ ದಾಸ್ತಾನು ಹಾಗೂ ಅಕ್ರಮ ಮಾಫಿಯಾದ ಬಗ್ಗೆ ದಾಖಲೆ ಸಮೇತ ಸಂಬಂಧಪಟ್ಟ ತಾಲೂಕು ಆರೋಗ್ಯಾಧಿಕಾರಿಗಳಿಗೆ ,ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ದೂರು ನೀಡಿದರೂ ಇದುವರೆಗೆ ಯಾವುದೇ ರೀತಿಯ ಕಾನೂನು ಕ್ರಮವನ್ನು ಕೈಗೊಂಡಿರುವುದಿಲ್ಲ. ನಮ್ಮನ್ನಾಳುವ ಜನಪ್ರತಿನಿಧಿಗಳು ಸರ್ಕಾರ ಹಾಗೂ ಅಧಿಕಾರಿಗಳು ತಮ್ಮ ತಮ್ಮ ಆಸ್ತಿ ಹಣ ಗಳಿಸುವ ಭರದಲ್ಲಿ ಬಡವರ ನಿರ್ಗತಿಕರ ಪ್ರಾಣಬಲಿ ಕೊಡುತ್ತಿರುವುದಂತು ಸತ್ಯ.

ಉಡುಪಿ ಜಿಲ್ಲಾ RTI ಮತ್ತು ಸಾಮಾಜಿಕ ಹೋರಾಟ ಸಮಿತಿಯು ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿಗಳಾದ ವೀಣಾ ಬಿ ಎನ್.ರವರಿಗೆ ದೂರು ನೀಡಿದೆ.

ಸಮಿತಿಯ ಸ್ಥಾಪಕರಾದ ಸತೀಶ್ ಪೂಜಾರಿ ಬಾರ್ಕೂರು, ಜಿಲ್ಲಾಧ್ಯಕ್ಷರಾದ ಸದಾಶಿವ ಶೆಟ್ಟಿ ಹೇರೂರು, ಸಲಹೆಗಾರರಾದ ಶೇಖರ್ ಹಾವಂಜೆ, ಖಜಾಂಚಿ ವಿನೋದ್ ಬಂಗೇರಾ, ಸದಸ್ಯರಾದ ಸಂಜೀವ ನಾಯ್ಕ್ ಕುಕ್ಕೆಹಳ್ಳಿ,ದೇವೆಂದ್ರ, ಕಿರಣ್ ಪೂಜಾರಿ ಕುಂದಾಪುರ

ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

02/04/2022 11:01 am

Cinque Terre

13.6 K

Cinque Terre

0

ಸಂಬಂಧಿತ ಸುದ್ದಿ