ಮಂಗಳೂರು: ಆರ್ ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆಗೆ (ಮಾರ್ಚ್ 21) ಆರು ವರ್ಷ. ಬಾಳಿಗಾ ಕೊಲೆ ಪ್ರಕರಣವನ್ನು SIT ತನಿಖೆಗೊಳಪಡಿಸಲು ಒತ್ತಾಯಿಸಿ ಇಂದು ದೇಶಪ್ರೇಮಿ ಸಂಘಟನೆಗಳ ಒಕ್ಕೂಟ ನೇತೃತ್ವದಲ್ಲಿ ಶ್ರೀ ವೆಂಕಟರಮಣ ದೇವಳದ ಬಳಿಯಿಂದ ಬಾಳಿಗಾ ಮನೆವರೆಗೆ ಮೆರವಣಿಗೆ ಹಾಗೂ ಸಾರ್ವಜನಿಕ ಸಭೆ ನಡೆಯಿತು.
ವಿಚಾರವಾದಿ ಪ್ರೊ. ನರೇಂದ್ರ ನಾಯಕ್ , ಮನೋವೈದ್ಯ ಡಾ. ಪಿ.ವಿ. ಭಂಡಾರಿ, ಡಿವೈಎಫ್ಐ ರಾಜ್ಯ ಮುಖಂಡರಾದ ಮುನೀರ್ ಕಾಟಿಪಳ್ಳ, ಎಂ.ದೇವದಾಸ್, ರಘು ಎಕ್ಕಾರ್, ವಿ.ಕುಕ್ಯಾನ್, ಕರುಣಾಕರ್, ಅಮೃತ ಶೆಣೈ, ಕೆಪಿಸಿಸಿ ಮಹಿಳಾ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ್ ಮುಂತಾದವರು ಉಪಸ್ಥಿತರಿದ್ದರು.
Kshetra Samachara
21/03/2022 10:47 pm