ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: 'ಈಶ್ವರಪ್ಪ ಒಬ್ಬ ಪೆದ್ದ, ಮತಾಂಧ, ಹತ್ಯೆ ಪ್ರಕರಣಕ್ಕೆ ಕಮ್ಯೂನಲ್ ಬಣ್ಣ ಕೊಟ್ಟವ'

ಬಂಟ್ವಾಳ: ಹತ್ಯೆ ಪ್ರಕರಣವನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡ ಸಚಿವ ಈಶ್ವರಪ್ಪ ಒಬ್ಬ ಪೆದ್ದ, ಮತಾಂಧ. ಅವರು ಸೆಕ್ಷನ್ ಉಲ್ಲಂಘಿಸಿ ಮೆರವಣಿಗೆ ಮಾಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಬಂಟ್ವಾಳದ ಬಿ.ಸಿ.ರೋಡಿನಲ್ಲಿ ಇಂದು ಮಾತನಾಡಿದ ಅವರು, ಸಮಾಜ ಸಾಮರಸ್ಯದಿಂದ ಬಾಳ್ವೆ ಮಾಡಬೇಕಾದರೆ ಬಿಜೆಪಿಯನ್ನು ಕಿತ್ತೊಗೆಯಬೇಕು. ಪ್ರಧಾನಿ ನರೇಂದ್ರ ಮೋದಿ ದೊಡ್ಡ ಸುಳ್ಳುಗಾರ. ಹಾಗೆಯೇ ಬಿಜೆಪಿ ಕೋಮುವಾದಿ ಎಂದು ಜರೆದರು.

ಶಿವಮೊಗ್ಗದಲ್ಲಿ ನಡೆದ ಹತ್ಯೆ ಪ್ರಕರಣದಲ್ಲಿ ಸೆಕ್ಷನ್ ಉಲ್ಲಂಘಿಸಿ ಮೆರವಣಿಗೆ ಮಾಡಿದ ಸಚಿವ ಈಶ್ವರಪ್ಪ ಒಬ್ಬ ಪೆದ್ದ. ಹತ್ಯೆ ಪ್ರಕರಣಕ್ಕೆ ರಾಜಕೀಯ ಬಣ್ಣ ಹಚ್ಚುವ ಬಿಜೆಪಿಯವರ ಬಗ್ಗೆ ಜಾಗರೂಕರಾಗಿರಬೇಕು. ಶಿವಮೊಗ್ಗದಲ್ಲಿ ಮೃತ ವ್ಯಕ್ತಿಗೆ 25 ಲಕ್ಷ ರೂ. ಕೊಟ್ಟಿದ್ದಾರೆ. ಬೆಳ್ತಂಗಡಿಯಲ್ಲಿ ದಲಿತ ಯುವಕ ಮೃತಪಟ್ಟಿದ್ದಕ್ಕೆ, ನರಗುಂದದಲ್ಲಿ ಮುಸ್ಲಿಂ ಮೃತಪಟ್ಟಿದ್ದಕ್ಕೆ ಏನು ಕೊಟ್ಟಿದ್ದಾರೆ? ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ಹಚ್ಚಿದ್ದಾರೆ ಎಂದು ಗುಡುಗಿದರು.

ಜಾತಿ ಬಿಟ್ಟು ಮನುಷ್ಯರಾಗಿ ಬದುಕಿ, ಮಹಾತ್ಮಾ ಗಾಂಧೀಜಿಯವರು ನಮಗೆಲ್ಲರಿಗೂ ಮಾರ್ಗದರ್ಶಕರು. ಗಾಂಧೀಜಿಯವರನ್ನು ಕೊಂದ ಗೋಡ್ಸೆ ವಂಶಸ್ಥರು ಇಂದು ಸಾಮರಸ್ಯವನ್ನು ಹಾಳು ಮಾಡುತ್ತಿದ್ದಾರೆ. ಗೋಡ್ಸೆ ಒಬ್ಬ ಮತಾಂಧ. ನಾವೆಲ್ಲ ಗಾಂಧೀಜಿ ಅನುಯಾಯಿಗಳು. ಈ ಆರ್‌ಎಸ್‌ಎಸ್‌, ಬಜರಂಗದಳ, ಶ್ರೀರಾಮಸೇನೆ ಇವರೆಲ್ಲಾ ಗೋಡ್ಸೆ ಮತ್ತು ಸಾವರ್ಕರ್ ಅನುಯಾಯಿಗಳು. ಅವರ ಕೊಡುಗೆ ದೇಶಕ್ಕೇನಿದೆ ಎಂದು ಪ್ರಶ್ನಿಸಿದರು.

ಮಾಜಿ ಸಚಿವ ಬಿ.ರಮಾನಾಥ ರೈ ಪ್ರಾಸ್ತಾವಿಕ ಮಾತನಾಡಿದರು. ಇಬ್ರಾಹಿಂ ನವಾಜ್ ಬಡಕಬೈಲ್ ಸ್ವಾಗತಿಸಿದರು. ಪ್ರಮುಖರಾದ

ಹರೀಶ್ ಕುಮಾರ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಮಂಜುನಾಥ ಭಂಡಾರಿ, ಪ್ರಮುಖರಾದ ಸುಧೀರ್ ಕುಮಾರ್ ಮುರೊಳ್ಳಿ ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

19/03/2022 07:12 pm

Cinque Terre

25.68 K

Cinque Terre

13

ಸಂಬಂಧಿತ ಸುದ್ದಿ