ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮಕ್ಕಳಿಗೆ ನೈತಿಕ ವಿದ್ಯೆ ಕಲಿಸಲು ತಕರಾರಿಲ್ಲ, ನಾನು ಭಗವದ್ಗೀತೆ ವಿರೋಧಿಯಲ್ಲ; ಸಿದ್ದರಾಮಯ್ಯ

ಮಂಗಳೂರು: ನಾನು ಹಿಂದುತ್ವದಲ್ಲಿ ನಂಬಿಕೆ ಇಟ್ಟವನು. ನಾನು ಭಗವದ್ಗೀತೆ ವಿರೋಧಿಯಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದ ನಿಮಿತ್ತ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದು ಮಾತನಾಡಿದರು.

ಮಕ್ಕಳಿಗೆ ನೈತಿಕ ವಿದ್ಯೆ ಕಲಿಸಲು ನಮ್ಮದೇನೂ ತಕರಾರಿಲ್ಲ. ನಾವು ಸಂವಿಧಾನ ಮತ್ತು ಸೆಕ್ಯುಲರಿಸಂ ನಲ್ಲಿ ನಂಬಿಕೆ ಇಟ್ಟವರು. ಮಕ್ಕಳಿಗೆ ಭಗವದ್ಗೀತೆನಾದ್ರು ಹೇಳಿಕೊಡಲಿ. ಕುರಾನ್, ಬೈಬಲ್ ನಾದ್ರೂ ಹೇಳಿ ಕೊಡಲಿ. ಆದ್ರೆ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಅಷ್ಟೇ. ಮಕ್ಕಳಿಗೆ ಮಾರ್ಕೆಟ್ ಗೆ ಅನುಗುಣವಾಗಿ ಕ್ವಾಲಿಟಿ ಎಜುಕೇಶನ್ ನೀಡಬೇಕು.

ಭಗವದ್ಗೀತೆಯನ್ನು ಮನೆಗಳಲ್ಲಿ ಮಕ್ಕಳಿಗೆ ಹೇಳಿ ಕೊಡಲ್ವ? ನಾನು ಕೂಡ ಹಿಂದೂ. ನನಗೂ ನನ್ನ ಮನೆಯಲ್ಲಿ ಭಗವದ್ಗೀತೆ, ರಾಮಾಯಣ, ಮಹಾಭಾರತ ಹೇಳಿಕೊಟ್ಟಿದ್ದಾರೆ. ನಮ್ಮಲ್ಲಿ ಸಹಿಷ್ಣುತೆ, ಸಹಬಾಳ್ವೆ ಇರಬೇಕು ಎಂದರು.

Edited By : Manjunath H D
PublicNext

PublicNext

19/03/2022 12:29 pm

Cinque Terre

49.22 K

Cinque Terre

13

ಸಂಬಂಧಿತ ಸುದ್ದಿ