ಮಂಗಳೂರು: ಉಕ್ರೇನ್ ಮೇಲೆ ರಷ್ಯಾ ದಾಳಿ ವಿಚಾರ ಒಂದು ತಿಂಗಳ ಮೊದಲೇ ಗೊತ್ತಿತ್ತು. ಆದರೂ ಅಲ್ಲಿದ್ದ ಭಾರತೀಯ ಮೂಲದ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲು ಯಾಕೆ ಸರಕಾರ ಕ್ರಮ ಕೈಗೊಂಡಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ವಿಧಾನಸಭೆ ವಿಪಕ್ಷ ಉಪ ನಾಯಕ ಯು.ಟಿ. ಖಾದರ್ ವಾಗ್ದಾಳಿ ನಡೆಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಉಕ್ರೇನ್ ನಿಂದ ವಾಪಸ್ ಬಂದಿರುವ ವಿದ್ಯಾರ್ಥಿಗಳನ್ನು ಕೇಳಿದ್ದಲ್ಲಿ ಅವರು ಎದುರಿಸಿರುವ ಕಷ್ಟಗಳೇನೆಂದು ತಿಳಿಯುತ್ತದೆ. ವಿದ್ಯಾರ್ಥಿಗಳು ಕಷ್ಟಪಟ್ಟು ಜೀವದ ಹಂಗು ತೊರೆದು ಬಾರ್ಡರ್ ಗೆ ಬಂದು ಸೇರಿದ್ದಾರೆ. ಆದರೆ, ಸರ್ಕಾರ ನಾವೇ ಕರೆದುಕೊಂಡು ಬಂದಿರುವಂತೆ ಪೋಸ್ ಕೊಡುತ್ತದೆ ಎಂದು ಹರಿಹಾಯ್ದರು.
ಪ್ರಧಾನಮಂತ್ರಿ ಒಂದು ಪೋನ್ ಮಾಡಿದ್ರೆ ಯುದ್ಧ ನಿಲ್ಲುತ್ತದೆಯಂತೆ. ಹಾಗಾದರೆ ಇನ್ನೂ ಯಾಕೆ ಯುದ್ದ ನಿಂತಿಲ್ಲ ಎಂದು ಯು.ಟಿ. ಖಾದರ್ ವ್ಯಂಗ್ಯವಾಡಿದರು.
Kshetra Samachara
06/03/2022 09:08 pm