ಬಂಟ್ವಾಳ: ಸೇತುವೆ ಉದ್ಘಾಟನೆಗೆ ಅಡ್ಡಿಪಡಿಸಿ ಶಾಸಕರ ಎದುರೇ ನೂಕಾಟ-ತಳ್ಳಾಟ ನಡೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದಲ್ಲಿ ಘಟನೆ ನಡೆದಿದೆ.
ಪೆರುವಾಯಿ ಗ್ರಾಮದ ಮುಂಚಿರಬೆಟ್ಟು- ಬದಿಯಾರು ಸಂಪರ್ಕಿಸುವ ರಸ್ತೆ ಕಾಮಗಾರಿ ವಿಚಾರದಲ್ಲಿ ಬಿಜೆಪಿ ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರ ಮಧ್ಯೆ ಸಂಘರ್ಷ ನಡೆದಿದೆ. ಶಾಸಕರ ಎದುರೇ ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದಿದೆ. ಸೇತುವೆ ಉದ್ಘಾಟನೆಗೆ ಆಗಮಿಸಿದ್ದ ಪುತ್ತೂರು ಶಾಸಕ ಸಂಜೀವ ಮಠಂದೂರು ಜನರನ್ನು ಸಮಾಧಾನಪಡಿಸಿದರೂ ವಾಗ್ವಾದ ತಾರಕಕ್ಕೇರಿ ಪರಸ್ಪರ ನೂಕಾಟ-ತಳ್ಳಾಟ ನಡೆಯಿತು.
ಖಾಸಗಿ ವ್ಯಕ್ತಿ ಜಾಗ ಒದಗಿಸದ ಕಾರಣ ಅರ್ಧಕ್ಕೆ ರಸ್ತೆ ಕಾಮಗಾರಿ ನಿಂತಿದೆ. ದೇವಸ್ಥಾನದವರೆಗೆ ಕಾಮಗಾರಿ ನಡೆಸದೇ ಸೇತುವೆ ಉದ್ಘಾಟಿಸಲು ಬಿಡಲ್ಲ ಅಂತ ಹಿಂದೂ ಕಾರ್ಯಕರ್ತರು ಅಡ್ಡಿಪಡಿಸಿದ್ರು. ಮಸೀದಿಯವರೆಗೆ ರಸ್ತೆ ಕಾಮಗಾರಿ ನಡೆಸಿದ್ದು, ದೇವಸ್ಥಾನಕ್ಕೆ ರಸ್ತೆ ಇಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದರು. ಈ ವಾಗ್ವಾದದ ನಡುವೆಯೇ ರಿಬ್ಬನ್ ಕತ್ತರಿಸಿ, ತೆಂಗಿನ ಕಾಯಿ ಒಡೆದು ಶಾಸಕರು ಸೇತುವೆ ಉದ್ಘಾಟಿಸಿದರು.
Kshetra Samachara
02/03/2022 07:59 pm