ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಹಿಂದೂ ಕಾರ್ಯಕರ್ತ ಹರ್ಷ ಹತ್ಯೆ: ಬೃಹತ್ ಖಂಡನಾ ಸಭೆ

ಕುಂದಾಪುರ: ಹಿಂದೂ ಕಾರ್ಯಕರ್ತ ಹರ್ಷ ಹತ್ಯೆ ಖಂಡಿಸಿ ಹಾಗೂ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಗಂಗೊಳ್ಳಿಯ ಹಿಂದೂ ಜಾಗರಣ ವೇದಿಕೆಯ ನೇತೃತ್ವದಲ್ಲಿ ಗಂಗೊಳ್ಳಿಯಲ್ಲಿ ಬೃಹತ್ ಖಂಡನಾ ಸಭೆ ನಡೆಯಿತು.

ನಂತರ ಹರ್ಷ ಹಾಗೂ ಜ್ಯೋತಿಷ್ ಕುಮಾರ್ ಇವರ ಆತ್ಮಕ್ಕೆ ಸದ್ಗತಿ ಕೋರಿ ಮೌನಚರಣೆ ನಡೆಯಿತು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಉದ್ಯಮಿ ಬಡಾಮನೆ ರತ್ನಾಕರ ಶೆಟ್ಟಿಯವರು ಇನ್ನು ಮುಂದೆ ಹಿಂದೂಗಳು ಇದೇ ರೀತಿ ಮೌನವಾಗಿದ್ದರೆ ಮತ್ತಷ್ಟು ಹಿಂದೂ ಕಾರ್ಯಕರ್ತರ ಕೊಲೆಗಳು ನಮ್ಮೆದುರಲ್ಲೇ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಈ ಸಂದರ್ಭದಲ್ಲಿ ಹಿಂಜಾವೇ ಜಿಲ್ಲಾ ಉಪಾಧ್ಯಕ್ಷ ಶಂಕರ್ ಕೋಟ, ವಾಸುದೇವ ಗಂಗೊಳ್ಳಿ, ರತ್ನಾಕರ ಗಂಗೊಳ್ಳಿ, ಮೋಹನ್, ಮಹೇಶ್, ನವೀನ್ ಗಂಗೊಳ್ಳಿ, ರವೀಂದ್ರ ಪಟೇಲ್, ಸತೀಶ್ ಜಿ, ಗಂಗೊಳ್ಳಿ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಉಪಾಧ್ಯಕ್ಷೆ ಪ್ರೇಮಚಂದ್ರ ಪೂಜಾರಿ, ಗಂಗೊಳ್ಳಿಯ ಹಿಂಜಾವೇ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

02/03/2022 11:51 am

Cinque Terre

5.54 K

Cinque Terre

0

ಸಂಬಂಧಿತ ಸುದ್ದಿ