ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ಇಬ್ಬಗೆ ನೀತಿ; ಶಾಸಕ ಮಠಂದೂರು

ಪುತ್ತೂರು: ಹಿಜಾಬ್ ವಿಚಾರದಲ್ಲಿ ಬಿಜೆಪಿ ಸ್ಪಷ್ಟ ನಿಲುವು ಹೊಂದಿದೆ. ಆದರೆ, ಕಾಂಗ್ರೆಸ್ ಮಾತ್ರ ಈ ವಿಚಾರದಲ್ಲಿ ಇಬ್ಬಗೆ ಧೋರಣೆ ಅನುಸರಿಸಿದೆ ಎಂದು ಶಾಸಕ ಸಂಜೀವ ಮಠಂದೂರು ಆಪಾದಿಸಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕರು, ಶಾಲೆಗಳಲ್ಲಿ ಯಾವುದೇ ಧರ್ಮಗಳ ಗುರುತು ಕಾಣಿಸಿಕೊಳ್ಳಬಾರದು ಮತ್ತು ಸಮವಸ್ತ್ರಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂಬುದು ಬಿಜೆಪಿ ನಿಲುವು. ನಮ್ಮ ಸರಕಾರದ ಧೋರಣೆಯೂ ಇದೇ ಆಗಿದೆ.

ಉಳಿದಂತೆ ನ್ಯಾಯಾಲಯ ಈ ವಿಚಾರದಲ್ಲಿ ನೀಡುವ ತೀರ್ಪಿಗೆ ಸರಕಾರ ಮತ್ತು ನಮ್ಮ ಪಕ್ಷ ಬದ್ಧವಾಗಿದೆ. ಆದರೆ, ಕಾಂಗ್ರೆಸ್ ದ್ವಂದ್ವ ನಿಲುವು ಹೊಂದಿದೆ. ಸಿದ್ಧರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇಬ್ಬರೂ ಈ ವಿಚಾರದಲ್ಲಿ ಉತ್ತರ- ದಕ್ಷಿಣದಂತಿದ್ದಾರೆ. ಸದನದಲ್ಲಿ ಹಿಜಾಬ್ ಬಗ್ಗೆ ಚರ್ಚೆಗೆ ಸರಕಾರ ಸಿದ್ಧವಿತ್ತು. ಆದರೆ, ಕಾಂಗ್ರೆಸೇ ಚರ್ಚೆಗೆ ಸಿದ್ಧವಿರಲಿಲ್ಲ.

ಅಲ್ಪಸಂಖ್ಯಾತರು ಕೈ ಬಿಡಬಹುದು ಎಂಬ ಭಯ ಅದಕ್ಕೆ ಕಾಡಿರಬೇಕು. ಅದಕ್ಕಾಗಿ ಹಿಜಾಬ್ ಕುರಿತು ಚರ್ಚೆ ಮಾಡದೆ ಈಶ್ವರಪ್ಪ ಅವರ ಹೇಳಿಕೆಯನ್ನೇ ಇಟ್ಟುಕೊಂಡು ದೊಡ್ಡ ರಾದ್ಧಾಂತ ಮಾಡಿ ಕಲಾಪ ನಡೆಯಲು ಅವಕಾಶ ನೀಡಲಿಲ್ಲ.

ಇದರಿಂದ 10 ದಿನಗಳ ಜಂಟಿ ಅಧಿವೇಶನದಲ್ಲಿ ಜನಪರ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಸಾಧ್ಯವಾಗಲೇ ಇಲ್ಲ.

ಇದು ಜನರಿಗೆ ಮಾಡಿದ ದ್ರೋಹ. ಸದನದಲ್ಲಿ ರಾಷ್ಟ್ರಧ್ವಜವನ್ನು ಪ್ರದರ್ಶನ ಮಾಡಿದ ಕಾಂಗ್ರೆಸ್ ಸದಸ್ಯರು ಧ್ವಜ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ದೂರಿದರು.

Edited By : Nagesh Gaonkar
Kshetra Samachara

Kshetra Samachara

24/02/2022 10:06 pm

Cinque Terre

10.18 K

Cinque Terre

0

ಸಂಬಂಧಿತ ಸುದ್ದಿ