ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಹರ್ಷ ಕೊಲೆ ಖಂಡಿಸಿ ಪ್ರತಿಭಟನೆ; "ನಮ್ಮೊಂದಿಗಿರುವ ದೇಶದ್ರೋಹಿಗಳಿಂದ ಅರಾಜಕತೆ"

ಕಾಪು: ಶಿವಮೊಗ್ಗದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಭಜರಂಗದಳ ಕಾರ್ಯಕರ್ತ ಹರ್ಷ ಅವರ ಕೊಲೆ ಆರೋಪಿಗಳನ್ನು ಶೀಘ್ರ ಬಂಧಿಸಿ, ಕಠಿಣ ಶಿಕ್ಷೆಗೊಳಪಡಿಸುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಕಾಪು ಪ್ರಖಂಡದ ವತಿಯಿಂದ ಕಾಪು ತಹಶೀಲ್ದಾರ್ ಕಚೇರಿ ಮುಂಭಾಗ ಇಂದು ಪ್ರತಿಭಟನೆ ನಡೆಯಿತು.

ಕಾಪು ಕ್ಷೇತ್ರ ಬಿಜೆಪಿ ಮಾಜಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಮಾತನಾಡಿ, ಇಂದು ನಮ್ಮೊಂದಿಗೆಯೇ ಇರುವ ಉಗ್ರರು, ಭಯೋತ್ಪಾದಕರು ಮತ್ತು ದೇಶ ದ್ರೋಹಿಗಳು ದೇಶದ ಭದ್ರತೆಗೆ ಅಪಾಯವುಂಟು ಮಾಡುತ್ತಿದ್ದು, ಅವರಿಂದಾಗಿ ಅರಾಜಕತೆ ಸೃಷ್ಟಿಯಾಗುತ್ತಿದೆ ಎಂದರು.

ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸುರಕ್ಷಾ ಪ್ರಮುಖ್ ರಾಜೇಶ್ ಕೋಟ್ಯಾನ್, ಕಾಪು ಪ್ರಖಂಡ ಸಂಚಾಲಕ ಸುಧೀರ್ ಪೂಜಾರಿ, ಅಧ್ಯಕ್ಷ ಜಯಪ್ರಕಾಶ್ ಪ್ರಭು, ಕಾರ್ಯದರ್ಶಿ ರಾಜೇಂದ್ರ ಶೆಣೈ, ಟೀಂ ಮೋದಿ ಸಂಘಟಕ ಯೋಗೀಶ್ ಕೈಪುಂಜಾಲು, ಮೊದಲಾದವರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

21/02/2022 10:06 pm

Cinque Terre

15.55 K

Cinque Terre

4

ಸಂಬಂಧಿತ ಸುದ್ದಿ