ಮಂಗಳೂರು: ರಾಜ್ಯದಲ್ಲಿ ವಕ್ಫ್ ಆಸ್ತಿ ದೊಡ್ಡ ಸಂಖ್ಯೆಯಲ್ಲಿ ಇದ್ರೂ ಅಲ್ಲಲ್ಲಿ ಆಸ್ತಿ ಕಬಳಿಕೆ ಆಗಿರುವುದು ಬಯಲಾಗಿದೆ. ಮುಸ್ಲಿಮರು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ.
ಆಸ್ತಿ ಕಬಳಿಕೆ ಆಗಿರುವ ಕಡೆಯಲ್ಲಿ ತ್ವರಿತಗತಿಯಲ್ಲಿ ನಮ್ಮ ಪರವಾಗಲು ಕಾನೂನಿನ ಹೋರಾಟ ಮಾಡುತ್ತೇವೆ ಎಂದು ವಕ್ಫ್ ಮಂಡಳಿ ಅಧ್ಯಕ್ಷ ಶಾಫಿ ಸಅದಿ ಹೇಳಿದ್ದಾರೆ.
ಅವರು ಮಂಗಳೂರು ನಗರದ ಪಾಂಡೇಶ್ವರದಲ್ಲಿರೋ ವಕ್ಫ್ ಬೋರ್ಡ್ ಕಚೇರಿಯ ಆಝಾದ್ ಭವನಕ್ಕೆ ಇಂದು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ಭೇಟಿ ನೀಡಿದರು. ಇದೇ ವೇಳೆ ಕಚೇರಿ ಸಿಬ್ಬಂದಿ ಅವರನ್ನು ಹೂಗುಚ್ಛ ನೀಡಿ ಸ್ವಾಗತಿಸಿದರು. ತದನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ಅಧೀನದಲ್ಲಿರುವ ಆಸ್ತಿಯನ್ನು ಸಂರಕ್ಷಿಸುವ ವಿಚಾರ ಬಹಳ ಸವಾಲಾಗಿ ಪರಿಣಮಿಸಿದೆ. ಯಾದಗಿರಿಯಲ್ಲಿ 300 ಎಕರೆ ಆಸ್ತಿ ವಕ್ಫ್ ನದ್ದಾಗಿದ್ದು ಅತಿಕ್ರಮಣವಾಗಿದೆ.
ಈಗಾಗಲೇ ಕಬಳಿಕೆ ಮಾಡಿದವರಿಗೆ ನಾವು ನೋಟಿಸನ್ನು ನೀಡಿದ್ದೀವಿ. ವಕ್ಫ್ ಮಂಡಳಿ ಕೈಯಲ್ಲಿ ಆಸ್ತಿ ಇಲ್ಲ. ನಮಗೆ ಕಚೇರಿ ಮಾತ್ರ ಇದೆ. ಆಸ್ತಿಗಳು ಅಂದರೆ ಕೆಲ ಸಂಸ್ಥೆಗಳು, ಮಸೀದಿಗಳು ನಡೆಸುವ ಆಸ್ತಿಗಳಾಗಿವೆ. ಇವುಗಳಲ್ಲಿ ಹೆಚ್ಚಿನ ಆಸ್ತಿಯನ್ನು ಕಬಳಿಸಲಾಗಿದೆ. ಹೀಗಾಗಿ ಮೂರು ತಿಂಗಳ ಅವಧಿಯೊಳಗೆ ಅಡಿಟಿಂಗ್ ಮಾಡಲು ಸೂಚನೆ ನೀಡಿದ್ದೀವಿ ಅಂದರು. ವಕ್ಫ್ ಆಸ್ತಿಗಳಿಂದ ಬರುವ ಆದಾಯವನ್ನು ಸಮುದಾಯದ ಅಭಿವೃದ್ಧಿಗೆ ಮೀಸಲಿಡಲಿದ್ದೇವೆ.
ಇನ್ನೂ ನಮ್ಮ ಮೊದಲ ಆದ್ಯತೆ ಶಿಕ್ಷಣ, ಆಸ್ಪತ್ರೆ ಅಭಿವೃದ್ಧಿ. ವಕ್ಫ್ ಆಸ್ತಿಗಳ ಅಭಿವೃದ್ಧಿಗೆ ನಾವು ಆದ್ಯತೆ ನೀಡಲಿದ್ದು, ಪ್ರಧಾನಮಂತ್ರಿ ಜನವಿಕಾಸ ಯೋಜನೆ ಅಡಿಯಲ್ಲಿ 75 ಕೋಟಿ ಅನುದಾನ ಸಿಕ್ಕಿದೆ. ನಾವು 377 ಕೋಟಿಯ ಬಜೆಟನ್ನು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೀವಿ. ಕೆಲ ಕಡೆ ದಾಖಲೆಗಳು ಸಿಗದ ಕಾರಣ ನ್ಯಾಯಾಲಯದಲ್ಲಿ ಹಿನ್ನೆಡೆಯಾಗಿದೆ ಅಂದರು. ಕಬಳಿಕೆ ಆಗಿರೋ ವಕ್ಫ್ ಆಸ್ತಿಯನ್ನು ಮರಳಿ ಪಡೆಯಲು ವಕ್ಫ್ ಮಂಡಳಿ ಕಾನೂನಿನ ಮೂಲಕ ಮರುವಶಪಡಿಸಿಕೊಳ್ಳಲಿದೆ. ಡ್ರೋನ್ ಸರ್ವೇಯನ್ನು ಆಳವಡಿಸಲು ನಮಗೆ ಅನುಮತಿ ಸಿಕ್ಕಿದೆ ಎಂದರು.
Kshetra Samachara
19/02/2022 05:47 pm