ಉಡುಪಿ : ನಾನು ಯಾವುದೇ ವಿದ್ಯಾರ್ಥಿನಿಯರ ಖಾಸಗಿ ಮಾಹಿತಿಗಳನ್ನು ಸೋರಿಕೆ ಮಾಡಿಲ್ಲ. ಆದರೆ ಅವರು ಮೊದಲೇ ಹಿಜಾಬ್ ಧರಿಸಿ ಬರುತ್ತಿದ್ದೆವು ಎಂದು ಪದೇ ಪದೇ ಹೇಳುತ್ತಿದ್ದರು.
ಈ ಹಿನ್ನೆಲೆಯಲ್ಲಿ ಕೆಲವು ಫೋಟೋಗಳನ್ನು ಅನಿವಾರ್ಯವಾಗಿ ಬಿಡುಗಡೆಗೊಳಿಸಲಾಯಿತು. ಅದೂ ಅಲ್ಲದೆ ಕೋರ್ಟಿಗೆ ದಾಖಲೆ ಸಲ್ಲಿಸುವ ಸಲುವಾಗಿ ಕೆಲವು ಮಾಹಿತಿಗಳನ್ನು ಬಹಿರಂಗಪಡಿಸಿದ್ದೇವೆಯೇ ಹೊರತು ಅವರ ಫೋನ್ ನಂಬರ್ ಆಗಲಿ, ಇತರೆ ಯಾವುದೇ ಖಾಸಗಿ ಮಾಹಿತಿಯಾಗಲಿ ನಾವು ಬಹಿರಂಗಪಡಿಸಿಲ್ಲ ಎಂದು ಉಡುಪಿ ಶಾಸಕ ರಘುಪತಿ ಭಟ್ ಸ್ಪಷಪಡಿಸಿದ್ದಾರೆ.
ಅಂದಹಾಗೆ ವಿದ್ಯಾರ್ಥಿನಿಯರ ಖಾಸಗಿ ಮಾಹಿತಿಯನ್ನು ಸೋರಿಕೆ ಮಾಡಲಾಗಿದೆ ಎಂದು ವಿದ್ಯಾರ್ಥಿನಿಯರ ಪೋಷಕರು ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
Kshetra Samachara
18/02/2022 06:31 pm