ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ವಿದ್ಯಾರ್ಥಿಗಳಲ್ಲಿ ಮತೀಯವಾದ ತುಂಬುವ ಕೆಲಸ ಕೆಲವು ಸಂಘಟನೆಗಳಿಂದ ಆಗುತ್ತಿದೆ- ಸಂಜೀವ‌ ಮಠಂದೂರು

ಪುತ್ತೂರು: ಸಂವಿಧಾನದ ಅಡಿಯಲ್ಲಿ ಸರಕಾರದ ಜಾರಿಗೆ ತಂದ ಕಾನೂನನ್ನು ಪಾಲನೆ ಮಾಡುವುದು ಎಲ್ಲಾ ನಾಗರಿಕ ಸಮಾಜದ ಕರ್ತವ್ಯವಾಗಿದ್ದು, ಶಾಲಾ ಕಾಲೇಜುಗಳಲ್ಲಿ ಎಲ್ಲರೂ ಸಮಾನವಾಗಿರಬೇಕು ಎನ್ನುವ ನಿಟ್ಟಿನಲ್ಲಿ ಸಮವಸ್ತ್ರ ಕಾನೂನನ್ನು ಜಾರಿಗೆ ತರಲಾಗದೆ. ಆದರೆ ಇದೇ ವಿಚಾರವನ್ನಿಟ್ಟು ಇದೀಗ ಕೆಲವು ಮತೀಯ ಸಂಘಟನೆಗಳು ತಮ್ಮ ಮತೀಯವಾದವನ್ನು ವಿದ್ಯಾರ್ಥಿನಿಯರ ಮೇಲೆ ಹೇರುವಂತ ಪ್ರಯತ್ನ ನಡೆಸುತ್ತಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಆರೋಪಿಸಿದರು.

ಪುತ್ತೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ವಿದ್ಯಾರ್ಥಿಗಳನ್ನು ಮತೀಯವಾದ‌ ಮತ್ತು ಭಯೋತ್ಪಾದನೆಗೆ ಪ್ರಚೋದಿಸುವಂತ ಕಾರ್ಯದಲ್ಲಿ ಇಂಥ ಸಂಘಟನೆಗಳು ನಿರತವಾಗಿದ್ದು, ವಿದ್ಯಾರ್ಥಿಗಳು ಇವುಗಳಿಂದ ಎಚ್ಚರಿಕೆಯಿಂದ ಇರಬೇಕೆಂದು ಅವರು ಮನವಿ ಮಾಡಿದರು. ಶಾಲಾ ಕಾಲೇಜುಗಳಲ್ಲಿ ಜಾರಿಯಲ್ಲಿರುವ ಕಾನೂನನ್ನು ಪಾಲಿಸುವುದು ಎಲ್ಲಾ ವಿದ್ಯಾರ್ಥಿಗಳ ಕರ್ತವ್ಯವೆಂದ ಅವರು ಈ ನಿಟ್ಟಿನಲ್ಲಿ ಗೊಂದಲ ಅನಗತ್ಯ ಎಂದರು.

Edited By : Manjunath H D
Kshetra Samachara

Kshetra Samachara

12/02/2022 05:31 pm

Cinque Terre

14.65 K

Cinque Terre

1

ಸಂಬಂಧಿತ ಸುದ್ದಿ