ಪುತ್ತೂರು: ರಾಜ್ಯದಲ್ಲಿ ಹಿಜಾಬ್ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳಲು ರಾಜ್ಯ ಸರಕಾರದ ವೈಫಲ್ಯವೇ ಕಾರಣ ಎಂದು ಕೆ.ಪಿ.ಸಿ.ಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಆರೋಪಿಸಿದ್ದಾರೆ.
ಪುತ್ತೂರಿನ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಜಾಬ್ ವಿವಾದ ಬುಗಿಲೆದ್ದ ಕೂಡಲೇ ಸರಕಾರ ಮಧ್ಯಪ್ರವೇಶಿಸಿ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನವನ್ನು ಮಾಡಬೇಕಿತ್ತು. ವಿವಾದ ರಾಜ್ಯ ಹಾಗೂ ರಾಷ್ಟ್ರ ಮಟ್ಟಕ್ಕೆ ತಲುಪಿ, ಕೋರ್ಟ್ ಮೆಟ್ಟಲೇರುವವರೆಗೂ ಸರಕಾರ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಈ ಹಿಂದೆ ಇಲ್ಲದ ಹಿಜಾಬ್ ವಿವಾದ ಒಮ್ಮೆಲೇ ಏಳಲು ಕಾರಣವೇನು? ಈ ವಿವಾದದ ಹಿಂದೆ ಯಾರ ಕೈವಾಡವಿದೆ ಎನ್ನುವ ಬಗ್ಗೆ ತನಿಖೆ ನಡೆಯಬೇಕಿದೆ.ಮಂತ್ರಿಯಾಗಿರುವ ಕೆ.ಎಸ್.ಈಶ್ವರಪ್ಪ ಅವರು ಕೇಸರಿ ಶಾಲುಗಳನ್ನು ನಾವೇ ಪೂರೈಕೆ ಮಾಡಿದ್ದೇವೆ. ಏನಾಗಬೇಕು ಎನ್ನುವ ಉಡಾಫೆಯ ಹೇಳಿಕೆಯನ್ನು ನೀಡುತ್ತಿರುವುದು ಗೊಂದಲ ಇನ್ನಷ್ಟು ತಾರಕಕ್ಕೇರಲು ಕಾರಣವಾಗಿದೆ ಎಂದು ಕಾವು ಹೇಮನಾಥ ಶೆಟ್ಟಿ ದೂರಿದರು.
Kshetra Samachara
11/02/2022 02:24 pm