ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಹೈಕೋರ್ಟ್ ಮೇಲೆ ವಿಶ್ವಾಸ ಇದೆ:ಆದಷ್ಟು ಬೇಗ ತೀರ್ಪು ಬರಲಿ: ಸಿಎಫ್ ಐ ರಾಜ್ಯಾಧ್ಯಕ್ಷ

ಉಡುಪಿ: ರಾಜ್ಯಾದ್ಯಂತ ಹಿಜಾಬ್ ಕೇಸರಿ ವಿವಾದ ಪ್ರಕರಣ ವಿಸ್ತೃತ ಬೆಂಚ್ ಗೆ ವರ್ಗಾವಣೆಯಾಗಿದೆ.ಈ ವಿಚಾರವಾಗಿ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿರುವ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಥಾವುಲ್ಲಾ,ಸಂವಿಧಾನಾತ್ಮಕವಾಗಿ ತೀರ್ಪು ನಮ್ಮ ಪರ ಬರಬಹುದು.

ಮಾನ್ಯ ಹೈಕೋರ್ಟ್ ಮೇಲೆ ನಮಗೆ ವಿಶ್ವಾಸ ಇದೆ.ಆದಷ್ಟು ಬೇಗ ತೀರ್ಪು ಬರಲಿ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಹೇಳಿದ್ದಾರೆ.

ರಾಜ್ಯದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯಾವುದೇ ಗೊಂದಲ ಆಗಬಾರದು.ಜಡ್ಜ್ ಮೆಂಟ್ ಬರುವತನಕ ಸ್ಕಾರ್ಫ್ ಹಾಕುವ ಅವಕಾಶವನ್ನು ಕೋರ್ಟ್ ನೀಡಬೇಕು.ವಿಸ್ತೃತ ಬೆಂಚಿನಲ್ಲಿ ಕೂಲಂಕುಶ ವಾದ ಚರ್ಚೆಗಳು ನಡೆಯುವ ಸಾಧ್ಯತೆಯಿದೆ.ಆದಷ್ಟು ಬೇಗ ತೀರ್ಪು ಬರಲಿ ಎಂಬುದು ನಮ್ಮ ಆಶಯ ಎಂದು ಹೇಳಿದ್ದಾರೆ.

Edited By : Manjunath H D
Kshetra Samachara

Kshetra Samachara

09/02/2022 06:09 pm

Cinque Terre

18.7 K

Cinque Terre

7

ಸಂಬಂಧಿತ ಸುದ್ದಿ