ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನಾನು ಯಾರು ಎಂದು ನನ್ನ ಕ್ಷೇತ್ರದ ಜನರ ಬಳಿ ಸಿದ್ಧರಾಮಯ್ಯ ಕೇಳಲಿ: ರಘುಪತಿ ಭಟ್ ತಿರುಗೇಟು!

ಉಡುಪಿ: ಮಾಜಿ ಸಿದ್ದರಾಮಯ್ಯ ಏಕವಚನದಲ್ಲಿ ಮಾತನಾಡಿದ ಶೈಲಿಗೆ ಸಿಂಪತಿ ಇದೆ. ನಾನು ಅವರದ್ದೇ ದಾಟಿಯಲ್ಲಿ ಮಾತನಾಡಬಹುದು. ನಾನು ಆ ರೀತಿ ಮಾತನಾಡಿದರೆ ಶೋಭೆ ತರಲ್ಲ ಎಂದು ಉಡುಪಿ ಶಾಸಕ ರಘುಪತಿ ಭಟ್ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮದ ಜೊತೆ ಮಾತನಾಡಿದ ಶಾಸಕರು ,ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವ ಸಮಯದಲ್ಲಿ ವಸ್ತ್ರಸಂಹಿತೆಯಿತ್ತು.

ಜಿಲ್ಲೆಯ ಎಲ್ಲ ಸರ್ಕಾರಿ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಇತ್ತು.ತರಗತಿಯಲ್ಲಿ ಹಿಜಾಬ್ ಧರಿಸದೆ ಪಾಠ ಕೇಳುತ್ತಿದ್ದರು.

2021 ಡಿಸೆಂಬರ್ ತಿಂಗಳಿನಿಂದ ಹಿಜಾಬ್ ತಕರಾರು ಶುರುವಾಗಿದೆ ಎಂದರು.

ಸಿದ್ದರಾಮಯ್ಯ ಅವರು ,ರಘುಪತಿ ಭಟ್ ಯಾರು ಅನ್ನೋದನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಮತದಾರರನ್ನ ಕೇಳಲಿ.

ಮೂರು ಬಾರಿ ಅವರ ಪಕ್ಷದ ಅಭ್ಯರ್ಥಿಯ ಎದುರು ಗೆದ್ದಿದ್ದೇನೆ. ಸಿದ್ದರಾಮಯ್ಯ ಅವರಿಗೆ ನಾನು ಯಾರು ಎಂದು ಗೊತ್ತಿಲ್ಲದೆ ಇರಬಹುದು. ಆದರೆ ಮೂರು ಬಾರಿ ಗೆಲ್ಲಿಸಿದ ಮತದಾರರಿಗೆ ಗೊತ್ತಿದೆ ಎಂದು ತಿರುಗೇಟು ನೀಡಿದರು.

Edited By : Nagesh Gaonkar
PublicNext

PublicNext

05/02/2022 11:23 am

Cinque Terre

34.61 K

Cinque Terre

4

ಸಂಬಂಧಿತ ಸುದ್ದಿ